ಭಾರತದ ಖ್ಯಾತ ಛಾಯಾಗ್ರಾಹಕ ಕಬೀರ್ ಲಾಲ್ ಈಗ ಚಿತ್ರ ನಿರ್ದೇಶನದತ್ತ ಆಸಕ್ತಿ

ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಸರಿಸುಮಾರು 100 ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಕಬೀರ್ ಲಾಲ್ ಇದೀಗ ಸ್ವತಂತ್ರವಾಗಿ ಚಿತ್ರದ ನಿರ್ದೇಶನಕ್ಕೆ ಇಳಿದಿದ್ದಾರೆ...
ಕಬೀರ್ ಲಾಲ್
ಕಬೀರ್ ಲಾಲ್
Updated on: 
ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಸರಿಸುಮಾರು 100 ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಕಬೀರ್ ಲಾಲ್ ಇದೀಗ ಸ್ವತಂತ್ರವಾಗಿ ಚಿತ್ರದ ನಿರ್ದೇಶನಕ್ಕೆ ಇಳಿದಿದ್ದಾರೆ. 
ಸ್ಪಾನಿಶ್ ನ ಜ್ಯೂಲಿಯಸ್ ಐಸ್ ಚಿತ್ರದ ಹಕ್ಕನ್ನು ಕಬೀರ್ ಲಾಲ್ ಖರೀದಿಸಿದ್ದು ಕನ್ನಡದಲ್ಲಿ ತಮ್ಮ ಚೊಚ್ಚಲ ಚಿತ್ರದ ನಿರ್ದೇಶನವನ್ನು ಮಾಡಲಿದ್ದಾರೆ. ಇದೇ ಚಿತ್ರವನ್ನು ತೆಲುಗು ಮತ್ತು ತಮಿಳಿನಲ್ಲಿ ರೀಮೇಡ್ ಮಾಡಲಿದ್ದಾರೆ. 
ಕಬೀರ್ ಲಾಲ್ ಅವರು ಬ್ಲಾಕ್ ಬಸ್ಟರ್ ಚಿತ್ರಗಳಾದ ಪರ್ದೇಸ್, ಅಪ್ನೆ, ಯುವರಾಜ್ ಮತ್ತು ವೆಲ್ ಕಮ್ ಬ್ಯಾಕ್ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದರು. ಹಲವು ವರ್ಷಗಳಿಂದ ಒಳ್ಳೆಯ ಕಥೆಗಾಗಿ ಕಾಯುತ್ತಿದೆ. ಇದೀಗ ನಾನು ಅಂದುಕೊಂಡಂತಹ ಕಥೆ ಸಿಕ್ಕಿದ್ದು ನಿರ್ದೇಶನಕ್ಕೆ ಇಳಿಯುತ್ತಿದ್ದೇನೆ ಎಂದು ಕಬೀರ್ ಲಾಲ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com