ಚಂದನ್ ​ಶೆಟ್ಟಿಗೆ ‘ಗಾಂಜಾ ಕಿಕ್​’ ಸಂಕಷ್ಟ, ಪೊಲೀಸರಿಂದ ಸಮನ್ಸ್‌

'ಭಂಗಿ ಹೊಡೆದು ನಗುತಾ ಇರು…' ಎಂದು ಹಾಡಿದ್ದ ಕನ್ನಡದ ರ್ಯಾಪರ್ ಹಾಗೂ ಬಿಗ್ ​ಬಾಸ್ ಖ್ಯಾತಿಯ ಚಂದನ್​ ಶೆಟ್ಟಿ ...
ಚಂದನ್ ಶೆಟ್ಟಿ
ಚಂದನ್ ಶೆಟ್ಟಿ
ಬೆಂಗಳೂರು: 'ಭಂಗಿ ಹೊಡೆದು ನಗುತಾ ಇರು…' ಎಂದು ಹಾಡಿದ್ದ ಕನ್ನಡದ ರ್ಯಾಪರ್ ಹಾಗೂ ಬಿಗ್ ​ಬಾಸ್ ಖ್ಯಾತಿಯ ಚಂದನ್​ ಶೆಟ್ಟಿ ಅವರಿಗೆ ಈಗ ಸಂಕಷ್ಟ ಎದುರಾಗಿದ್ದು, ಗಾಂಜಾ ಪರವಾಗಿ ಹಾಡು ಬರೆದಿರುವ ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಸಿಸಿಬಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಮೂರು ವರ್ಷಗಳ ಹಿಂದೆ ‘ಅಂತ್ಯ’ ಚಿತ್ರದಲ್ಲಿ ‘ಗಾಂಜಾ ಕಿಕ್’​ ಎಂಬ ಹಾಡಿಗೆ ಧ್ವನಿ ನೀಡಿದ್ದ ಚಂದನ್​ ಶೆಟ್ಟಿ ಅವರಿಗೆ ಸಿಸಿಬಿ ಪೊಲೀಸರು ಸಮನ್ಸ್​ ಜಾರಿ ಮಾಡಿದ್ದು, ಖುದ್ದು ಬಂದು ವಿಚಾರಣೆ ಎದುರಿಸುವಂತೆ ಸೂಚಿಸಿದ್ದಾರೆ.
​ಭಂಗಿ ಹೊಡೆದು ನಗುತಾ ಇರು…
ಶಿವನು ಹಿಡಿದರೆ ಭಂಗಿ, 
ನಾವು ಹಿಡಿದರೆ ಕಂಬಿ… ಎಂಬ ಹಾಡಿನ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಮತ್ತು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್​ ಜಾರಿ ಮಾಡಿದ್ದಾರೆ.
2015ರಲ್ಲಿ ಬಿಡುಗಡೆಯಾಗಿದ್ದ ಅಂತ್ಯ ಚಿತ್ರದ ಭಂಗಿ ಹಾಡಿನಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ಸೇವನೆಗೆ ಪ್ರೋತ್ಸಾಹ ನೀಡುವಂತಹಾ ಸಾಹಿತ್ಯ ಇದೆ. ಹಾಗಾಗಿ ನಾವೇಕೆ ನಿಮ್ಮ ಮೇಲೆ ಪ್ರಕರಣ ದಾಖಲಿಸಬಾರದು ಎಂದು ಪೊಲೀಸರು ಚಂದನ್ ಶೆಟ್ಟಿಯನ್ನು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com