ಕೆಜಿಎಫ್ ಚಿತ್ರ ಐದೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು ಚಿತ್ರದ ಕುರಿತಂತೆ ಯಶ್ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಹೈದರಾಬಾದ್ ಗೆ ತೆರಳಿದ್ದ ಯಶ್ ಅವರನ್ನು ಪತ್ರಕರ್ತರೊಬ್ಬರು ನಿಮ್ಮ ನಟನೆಯ ಕೆಜಿಎಫ್ ಚಿತ್ರ ಪ್ರಭಾಸ್ ನಟನೆಯ ಛತ್ರಪತಿ ಚಿತ್ರದ ಮಟ್ಟಕ್ಕೆ ನಿರೀಕ್ಷೆ ಹುಟ್ಟುಹಾಕಿದೆ. ಹಾಗಾಗಿ ದಕ್ಷಿಣ ಭಾರತದಲ್ಲಿ ನೀವು ಎರಡನೇ ಪ್ರಭಾಸ್ ಆಗುವಿರಿ ಎಂದು ಪ್ರಶ್ನಿಸಿದ್ದರು.