ಭೈರವ -ಗೀತಾ ಕನ್ನಡ ಆವೃತ್ತಿಯಲ್ಲಿ ವಶಿಷ್ಠ ಸಿಂಹ ಹಿನ್ನೆಲೆ ಧ್ವನಿ

ಸ್ಯಾಂಡಲ್ ವುಡ್ ನಲ್ಲಿ ಹೈಪ್ ಕ್ರಿಕೆಟ್ ಮಾಡಿರುವ ಧನಂಜಯ್ ಅಭಿನಯದ ಹಾಗೂ ವಶಿಷ್ಠ ಸಿಂಹ ಹಿನ್ನೆಲೆ ಧ್ವನಿಯಾಗಿರುವ ಭೈರವ ಗೀತಾ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಎ ಸರ್ಟಿಫಿಕೇಟ್ ಸಿಕ್ಕಿದೆ
ಭೈರವ ಗೀತಾದ ಪೋಸ್ಟರ್
ಭೈರವ ಗೀತಾದ ಪೋಸ್ಟರ್
ಸ್ಯಾಂಡಲ್ ವುಡ್ ನಲ್ಲಿ ಹೈಪ್ ಕ್ರಿಕೆಟ್ ಮಾಡಿರುವ  ಧನಂಜಯ್ ಅಭಿನಯದ ಹಾಗೂ ವಶಿಷ್ಠ ಸಿಂಹ ಹಿನ್ನೆಲೆ ಧ್ವನಿಯಾಗಿರುವ   ಭೈರವ -ಗೀತಾ ಚಿತ್ರಕ್ಕೆ  ಸೆನ್ಸಾರ್ ಬೋರ್ಡ್  ನಿಂದ  ಎ ಸರ್ಟಿಫಿಕೇಟ್ ಸಿಕ್ಕಿದೆ.
ಪ್ರೇಮ ಕಥಾ ಹಂದರವುಳ್ಳ ಈ ಚಿತ್ರವನ್ನು ಸಿದ್ದಾರ್ಥ ತಾಟೊಳ್  ಇದೇ ಮೊದಲ ಬಾರಿಗೆ ಕನ್ನಡ ಹಾಗೂ ತೆಲುಗಿನಲ್ಲಿ ನಿರ್ದೇಶಿಸುತ್ತಿದ್ದಾರೆ. ವಶಿಷ್ಠ ಸಿಂಹ ವಿಶಿಷ್ಠ ಧ್ವನಿಗೆ ಹೆಸರಾಗಿದ್ದು, ಚಿತ್ರದ ಆರಂಭದ ಹಾಗೂ ಅಂತ್ಯ ಭಾಗದಲ್ಲಿ  ಚಿತ್ರದ ಬಗ್ಗೆ ವಿವರಣೆ ನೀಡಿದ್ದಾರೆ.
ತೆಲುಗು ವರ್ಸನ್ ನಲ್ಲಿ ಇದೇ ರೀತಿಯಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ  ಹಿನ್ನೆಲೆ ಧ್ವನಿಯಾಗಿದ್ದಾರೆ. ಹಿರಾ ಮೊರ್   ನಾಯಕಿ ನಟಿಯಾಗಿ ಅಭಿನಯಿಸಿದ್ದು, ರಾಜ ಬೆಳವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜ ಗೋಪಾಲ್  ವರ್ಮಾ ಹಾಗೂ ವಂಶಿ ಚಿತ್ರಕಥೆ ಬರೆದಿದ್ದು, ರಾಶಿ ಪ್ರೋಡಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ.  ರವಿಶಂಕರ್ ಸಂಗೀತ ಸಂಯೋಜಿಸಿದ್ದು,  ಜಗದೀಶ್ ಚೀಕಾಟಿ ಅವರ  ಛಾಯಾಗ್ರಾಹಣವಿದೆ.
ಡಿಸೆಂಬರ್ 7 ರಂದು  200 ಥಿಯೇಟರ್ ಗಳಲ್ಲಿ  ಬೈರವ ಗೀತಾ ಕನ್ನಡ ಆವೃತ್ತಿ ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ.  ತೆಲುಗು ಆವೃತ್ತಿ ಬಿಡುಗಡೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com