ಮದುವೆ ಸಮಾರಂಭಕ್ಕಾಗಿ ನೀನು ನನಗೆ ನೀಡಿದ್ದ 1 ಕೋಟಿ ರೂ.ನಲ್ಲಿ ಶಾಪಿಂಗ್ ಮಾಡಿ 20 ಲಕ್ಷ ಮಾತ್ರ ಉಳಿದುಕೊಂಡಿದೆ. ಮದುವೆ ರಿಂಗ್ ಸೇರದಂತೆ ನೀನು ನನಗೆ ಕೊಟ್ಟಿರುವ ವಧುದಕ್ಷಿಣೆ ಹಣವನ್ನು ವಾಪಸ್ ನೀಡುವುದಿಲ್ಲ. ನಿನ್ನಿಂದ ಏನಾಗುತ್ತೊ ಮಾಡಿಕೋ. ನಿನ್ನ ನಡೆಯಿಂದ ಮದುವೆ ಮುರಿದು ಬಿದ್ದಿದೆ. ಈಗ ನನ್ನ 10 ಜನ ಬಾಯ್ ಫ್ರೆಂಡ್ಸ್ ಹಾಗೂ ಅಪಾರ ಅಭಿಮಾನಿಗಳಿಗೆ ಉತ್ತರಿಸಬೇಕಿದೆ. ನಾನು ಕಳೆದ 15 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಉತ್ತಮ ಗೌರವ ಪಡೆದಿದ್ದು, ನನ್ನ ಕುಟುಂಬವನ್ನು ನಾನೇ ನಿರ್ವಹಿಸುತ್ತಿದ್ದೇನೆ. ನಿನ್ನಿಂದ ನನ್ನ ಗೌರವಕ್ಕೆ ದಕ್ಕೆ ಉಂಟಾಗಿದೆ. ನಾನು ಬಹಳ ಸರಳ ಹುಡುಗಿಯಾಗಿದ್ದು, ಸುಳ್ಳು ಹೇಳಲು ಭಯಸುವುದಿಲ್ಲ. ನನ್ನನ್ನು ಕ್ಷಮಿಸು ಎಂದು ರಾಖಿ ಕೇಳಿದ್ದಾರೆ.