ವಿನೋದ್ ಖನ್ನಾ ಮಾಜಿ ಪತ್ನಿ ಗೀತಾಂಜಲಿ ನಿಧನ

ಬಾಲಿವುಡ್ ನ ದಿವಂಗತ ನಟ ವಿನೋದ್ ಖನ್ನಾ ಮಾಜಿ ಪತ್ನಿ ಗೀತಾಂಜಲಿ ಡಿ.16 ರಂದು ನಿಧನರಾಗಿದ್ದಾರೆ.
ಗೀತಾಂಜಲಿ
ಗೀತಾಂಜಲಿ
ಬಾಲಿವುಡ್ ನ ದಿವಂಗತ ನಟ ವಿನೋದ್ ಖನ್ನಾ ಮಾಜಿ ಪತ್ನಿ ಗೀತಾಂಜಲಿ ಡಿ.16 ರಂದು ನಿಧನರಾಗಿದ್ದಾರೆ. 
70 ವರ್ಷದ ವಯಸ್ಸಿನ ಗೀತಾಂಜಲಿ ಹಾಗೂ ಅವರ ಪುತ್ರ ಅಕ್ಷಯ್ ಖನ್ನಾ ಮಾಂಡ್ವಾದಲ್ಲಿರುವ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದರು. ಶನಿವಾರ ಸಂಜೆಯೇ ಅನಾರೋಗ್ಯಕ್ಕೊಳಗಾದ ಗೀತಾಂಜಲಿ ಅವರನ್ನು ಚೋಂದಿ ಗ್ರಾಮದ ಬಳಿ ಇರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಬಳಿಕ ಮತ್ತೆ ಫಾರ್ಮ್ ಹೌಸ್ ಗೆ ಮರಳಿದ್ದರು. ಈ ಬಳಿಕ ಮನೆಯಲ್ಲಿದ್ದ ಸಹಾಯಕರಿಗೆ ತಾಯಿಯ ಆರೋಗ್ಯ ಗಮನಿಸುವಂತೆ ಹೇಳಿ ಅಕ್ಷಯ್ ಖನ್ನಾ ಫಾರ್ಮ್ ಹೌಸ್ ನಿಂದ ಹೊರ ಹೋಗಿದ್ದರು ವಾಪಸ್ ಬರುವ ವೇಳೆಗೆ ಗೀತಾಂಜಲಿ  ಪ್ರಜ್ಞೆ ತಪ್ಪಿದ್ದ ಸ್ಥಿತಿಯಲ್ಲಿದ್ದರು. ನಂತರ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಕೊನೆಯುಸಿರೆಳೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com