ಖ್ಯಾತ ನಟ ಧನುಷ್ ರಿಂದ ಇಂದು 'ಚಂಬಲ್' ಟೀಸರ್ ಲಾಂಚ್

ಸತೀಶ್ ನೀನಾಸಂ ಅವರ "ಚಂಬಲ್" ಇದಾಗಲೇ ಹಲವು ಕಾರಣಗಳಿಂದ ಸಾಕಷ್ಟು ಕುತೂಹಲ ಮೂಡಿಸಿದೆ. ಹ;ಅವು ರಂಗ ಕಲಾವಿದರು ಅಭಿನಯಿಸಿರುವ ಈ ಚಿತ್ರದ ಟೀಸರ್ ಇಂದು....
ಧನುಷ್
ಧನುಷ್
ಬೆಂಗಳೂರು: ಸತೀಶ್ ನೀನಾಸಂ ಅವರ "ಚಂಬಲ್" ಇದಾಗಲೇ ಹಲವು ಕಾರಣಗಳಿಂದ ಸಾಕಷ್ಟು ಕುತೂಹಲ ಮೂಡಿಸಿದೆ. ಹ;ಅವು ರಂಗ ಕಲಾವಿದರು ಅಭಿನಯಿಸಿರುವ ಈ ಚಿತ್ರದ ಟೀಸರ್ ಇಂದು (ಬುಧವಾರ) ಬಿಡುಗಡೆಯಾಗಲಿದೆ. ನಟ, ನಿರ್ದೇಶಕ ಧನುಷ್ ಟೀಸರ್ ಬಿಡುಗಡೆಗೊಳಿಸಲಿದ್ದಾರೆ. ಅಷ್ಟೇ ಅಲ್ಲ ಈ ಕಾರ್ಯಕ್ರಮ ಸಾಮಾಜಿಕ ತಾಣದಲ್ಲಿ ಲೈವ್ ಆಗಿ ಮೂಡಿಬರುತ್ತಿರುವುದು ಸಹ ವಿಶೇಷವೇ ಸರಿ.
"ಜೇಕಬ್ ವರ್ಗೀಸ್ ಧನುಷ್ ಅವರ ಆತ್ಮೀಯ ಸ್ನೇಹಿತರಾಗಿದ್ದು ಅವರು "ಚಂಬಲ್" ಟೀಸರ್ ಅನ್ನು ಬಿಡುಗಡೆಗೊಳಿಸಲು ಒಪಿದ್ದಾರೆ" ಎಂದು ಚಿತ್ರತಂಡದ ಸದಸ್ಯರೊಬ್ಬರು ಹೇಳಿದ್ದಾರೆ.
"ಅಯೋಗ್ಯ" ಚಿತ್ರದ ಬಳಿಕ ಸತೀಶ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಚಿತ್ರೈದಾಗಿದ್ದು ಚಿತ್ರದ ನಾಯಕಿಯಾಗಿ ಸೋನು ಗೌಡ ಅಭಿನಯಿಸಿದ್ದಾರೆ. ಅಲ್ಲದೆ ಕಿಶೋರ್, ಪವನ್ ಕುಮಾರ್, ರೋಜರ್ ನಾರಾಯಣ್ ಅವರ ಪ್ರಮುಖ ತಾರಾಬಳಗದೊಡನೆ 25 ರಂಗಕಲಾವಿದರೂ ಸಹ ತೆರೆ ಹಂಚಿಕೊಳ್ಳಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com