ನಿರ್ದೇಶಕ ಅನೂಪ್ ಭಂಡಾರಿ, ಸುದೀಪ್ ಕಾಂಬಿನೇಷನ್ 'ಬಿಲ್ಲ ರಂಗ ಬಾಷ ' ಪೋಸ್ಟರ್ ಬಿಡುಗಡೆ

ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಿಲ್ಲ ರಂಗ ಬಾಷ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.
ಅನೂಪ್ ಭಂಡಾರಿ, ಸುದೀಪ್
ಅನೂಪ್ ಭಂಡಾರಿ, ಸುದೀಪ್
ಬೆಂಗಳೂರು: ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್  ಭಂಡಾರಿ ನಿರ್ದೇಶನದ,  ಕಿಚ್ಚ ಸುದೀಪ್  ಅಭಿನಯಿಸುತ್ತಿರುವ  ಬಿಲ್ಲ ರಂಗ ಬಾಷ ಚಿತ್ರದ ಪೋಸ್ಟರ್   ಬಿಡುಗಡೆ ಆಗಿದೆ.
 ರಂಗಿತರಂಗ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಅನೂಪ್ ಭಂಡಾರಿ ಈಗ ಕಿಚ್ಚನ ಜೊತೆ ಕೈ ಜೋಡಿಸಿದ್ದಾರೆ. ಸಿನಿಮಾದ ಟೈಟಲ್ ವಿಭಿನ್ನವಾಗಿದ್ದು, ಸುದೀಪ್ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಅಂದಹಾಗೆ, 18 ವರ್ಷಗಳ ಹಿಂದೆಯೇ ಸುದೀಪ್ ಗಾಗಿ ಅನೂಪ್ ಕಥೆ ಬರೆದಿದ್ದರಂತೆ! ಆದರೆ, ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲವಂತೆ. ಕಿರುಚಿತ್ರದ ಬಿಡುಗಡೆ ಕಾರ್ಯಕ್ರಮದಲ್ಲಿ ಸುದೀಪ್ ಗಮನಕ್ಕೆ  ತರಲಾಗಿ, ನನ್ನ ಕನಸು ಈಗ ನೆರವೇರುತ್ತಿದೆ ಎಂದು ಅನೂಪ್  ಭಂಡಾರಿ ಹೇಳಿಕೊಂಡಿದ್ದಾರೆ.
ಅನೂಪ್  ಭಂಡಾರಿ ಜೊತೆಗೆ ಚಿತ್ರ ಮಾಡುತ್ತಿರುವ ಬಗ್ಗೆ ಈ ಹಿಂದೆ  ಸುದೀಪ್ ಟ್ವಿಟರ್ ನಲ್ಲಿ ಸಂತಸ ಹಂಚಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com