ಕೆಜಿಎಫ್ ಗಾಗಿ ಮತ್ತೆ ರೀ ಓಪನ್ ಆಯ್ತು ಶಾರದಾ ​ಥಿಯೇಟರ್..!

8 ತಿಂಗಳಿಂದ ಪಾಳು ಬಿದ್ದಿದ್ದ ಥಿಯೇಟರ್ ವೊಂದು ಯಶ್ ಅಭಿಮಾನಿಯ ಸಾಹಸದಿಂದಾಗಿ ಮತ್ತೆ ಕೆಜಿಎಫ್ ಚಿತ್ರಕ್ಕಾಗಿ ಪುನಾರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕೊಪ್ಪಳ: 8 ತಿಂಗಳಿಂದ ಪಾಳು ಬಿದ್ದಿದ್ದ ಥಿಯೇಟರ್ ವೊಂದು ಯಶ್ ಅಭಿಮಾನಿಯ ಸಾಹಸದಿಂದಾಗಿ ಮತ್ತೆ ಕೆಜಿಎಫ್ ಚಿತ್ರಕ್ಕಾಗಿ ಪುನಾರಂಭವಾಗಿದೆ.
ಹೌದು.. ಜಗತ್ತಿನಾದ್ಯಂತ ನಿನ್ನೆ ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿರುವಂತೆಯೇ ಇತ್ತ ಕೊಪ್ಪಳದಲ್ಲಿ ಕಳೆದ 8 ತಿಂಗಳಿಂದ ಮುಚ್ಚಲ್ಪಟ್ಟಿದ್ದ ಥಿಯೇಟರ್ ವೊಂದು ಯಶ್ ಅಭಿಮಾನಿಯ ಸಾಹಸದಿಂದಾಗಿ ಕೆಜಿಎಫ್ ಗಾಗಿ ಮತ್ತೆ ಪುನಾರಂಭವಾಗಿದೆ.
ಆರ್ಥಿಕ ಮುಗ್ಗಟ್ಟಿನಿಂದಾಗಿ ಕಳೆದ 8 ತಿಂಗಳ ಹಿಂದೆ ಮುಚ್ಚಲ್ಪಟ್ಟಿದ್ದ ಕೊಪ್ಪಳದ ಗಡಿಯಾರ ಕಂಬದ ಹತ್ತಿರವಿರುವ ಶಾರದ ಟಾಕೀಸ್​ ಇದೀಗ ಮತ್ತೆ ಕಾರ್ಯಾರಂಭ ಮಾಡಿದೆ. ಕೊಪ್ಪಳದ ಈ ಶಾರದಾ ಟಾಕೀಸ್ ಗೆ ಸುಮಾರು 47 ವರ್ಷಗಳ ಇತಿಹಾಸವಿದ್ದು, ಕಳೆದ 8 ತಿಂಗಳಿನಿಂದ ಈ ಟಾಕೀಸ್ ಆರ್ಥಿಕ ತೊಂದರೆಯಿಂದಾಗಿ​ ಸಿನಿಮಾಗಳ ಪ್ರದರ್ಶನ ಕಾಣದೆ ಪಾಳು ಬಿದ್ದಿತ್ತು. 
ಆದರೆ ರಾಕಿಭಾಯ್​ ಕೆಜಿಎಫ್​​ ಸಿನಿಮಾ ರಿಲೀಸ್ ಆಗುತ್ತಿದ್ದ ಹಿನ್ನೆಲೆಯಲ್ಲಿ ಕಲುಬುರ್ಗಿ ಮೂಲದ ಯಶ್​ ಅಭಿಮಾನಿಯೊಬ್ಬರು ಟಾಕೀಸ್​ ಮಾಲೀಕರಿಂದ ಅದನ್ನು ಲೀಸ್ ಗೆ ಪಡೆದು ಟಾಕೀಸ್ ಅನ್ನು ಮತ್ತೆ ರೆಡಿ ಮಾಡಿಸಿದ್ದರು. ಅಲ್ಲದೇ ಕೆಜಿಎಫ್ ಚಿತ್ರ ಬಿಡುಗಡೆ ಮುನ್ನಾದಿನ ರಾತ್ರೋರಾತ್ರಿ ಕೊಪ್ಪಳದ ಯಶ್​​ ಅಭಿಮಾನಿಗಳು ಶಾರದ ಟಾಕೀಸ್ ಅನ್ನ ಮಧುವಣಗಿತ್ತಿಯಂತೆ ರೆಡಿ ಮಾಡಿ ಬೆಳಗ್ಗೆ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಟ್ಟಿದ್ದಾರೆ.
ಈಗಾಗಲೇ ಹಲವು ದಾಖಲೆಗಳನ್ನ ತನ್ನ ಮುಡಿಗೇರಿಸಿಕೊಂಡಿರುವ ಕೆಜಿಎಫ್​ ಚಿತ್ರ ಹಾಳು ಬಿದ್ದಿದ್ದ ಟಾಕೀಸ್​ವೊಂದನ್ನು ಮತ್ತೆ ಶುರು ಮಾಡೋ ಮೂಲಕ ಮತ್ತೊಂದು ದಾಖಲೆ ಬರೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com