ಕೆಜಿಎಫ್ ಚಿತ್ರ ನೋಡುವುದೇ ಇಲ್ಲ ಎಂದ ಕೆಆರ್ ಕೆ ಜಾಡಿಸಿದ ಟ್ವೀಟಿಗರು!

ಸದಾಕಾಲ ವಿವಾದಗಳಿಂದಲೇ ಸುದ್ದಿ ಮಾಡೋ ಸ್ವಯಂಘೋಷಿತ ವಿಮರ್ಶಕ ಕಮಾಲ್ ಆರ್ ಖಾನ್ ಇದೀಗ ಕನ್ನಡದ ಕೆಜಿಎಫ್ ಚಿತ್ರದ ಕುರಿತಂತೆ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಸದಾಕಾಲ ವಿವಾದಗಳಿಂದಲೇ ಸುದ್ದಿ ಮಾಡೋ ಸ್ವಯಂಘೋಷಿತ ವಿಮರ್ಶಕ ಕಮಾಲ್ ಆರ್ ಖಾನ್ ಇದೀಗ ಕನ್ನಡದ ಕೆಜಿಎಫ್ ಚಿತ್ರದ ಕುರಿತಂತೆ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರದೊಂದಿಗೆ ಬಿಡುಗಡೆಯಾದ ಯಶ್ ಅಭಿನಯದ ಕೆಜಿಎಫ್ ಚಿತ್ರದ ಕುರಿತು ಟ್ವೀಟ್ ಮಾಡುವ ಮೂಲಕ ಕೆಆರ್ ಕೆ ಟ್ವೀಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಹೌದು ಜೀರೋ ಚಿತ್ರದೊಂದಿಗೆ ಬಿಡುಗಡೆಯಾಗುತ್ತಿರುವ ಕೆಜಿಎಫ್ ಚಿತ್ರವನ್ನು ತಾವು ಯಾವುದೇ ಕಾರಣಕ್ಕೂ ವೀಕ್ಷಿಸುವುದಿಲ್ಲ ಎಂದು ಹೇಳುವ ಮೂಲಕ ಕೆಆರ್ ಕೆ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಕೆಆರ್ ಕೆ ಟ್ವೀಟ್ ಗೆ ಟ್ವಿಟರ್ ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಹುತೇಕರು ಕೆಆರ್ ಕೆಯ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಕೆಜಿಎಫ್ ಚಿತ್ರಕ್ಕೆ ನಿನ್ನಂತಹ 2 ರೂಪಾಯಿ ಗಿರಾಕಿಯ ವಿಮರ್ಶೆಯ ಅಗತ್ಯವಿಲ್ಲ ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೆ ಕೆಲವರು ಪ್ಲೀಸ್ ನೀನು ಈ ಚಿತ್ರ ನೋಡಬೇಡ.. ನೀನು ನೋಡಿದ ಚಿತ್ರಗಳೆಲ್ಲಾ ಫ್ಲಾಪ್ ಲಿಸ್ಟ್ ಸೇರುತ್ತಿವೆ ಎಂದು ವ್ಯಂಗ್ಯ ಮಾಡಿದ್ದಾರೆ. 
ಇನ್ನು ಮತ್ತೊಂದು ಟ್ವೀಟ್ ಇದೇ ಕೆಆರ್ ಕೆ ಜೀರೋ ಚಿತ್ರದ ಕುರಿತಂತೆ ಟ್ವೀಟ್ ಮಾಡಿದ್ದು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಚಿತ್ರ ಹಿಂದೆ ಬಿದ್ದಿದೆ. ಈ ಬಗ್ಗೆ ಗಮನ ಹರಿಸಿ ಎಂದು ನಟ ಶಾರುಖ್ ಹಾಗೂ ನಿರ್ದೇಶಕರಿಗೆ ಹೇಳಿದ್ದಾರೆ.
ಇನ್ನು ಕೆಆರ್ ಕೆ ಟ್ವೀಟ್ ಮತ್ತು ಅದಕ್ಕೆ ಕೆಜಿಎಫ್ ಚಿತ್ರದ ಅಭಿಮಾನಿಗಳು ನೀಡುತ್ತಿರುವ ಟಾಂಗ್ ಇದೀಗ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com