ಬೆಂಗಳೂರು: ರಂಗಭೂಮಿ ಹಿನ್ನೆಲೆಯಿಂದ ಬಂದು ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟ ನೀನಾಸಂ ಸತೀಶ್ ಈಗ ಆ್ಯಕ್ಷನ್ ಕಟ್ ಹೇಳಲು ನಿರ್ಧರಿಸಿದ್ದಾರೆ,
ಲುಸಿಯಾ ಚಿತ್ರದ ಮೂಲಕ ನಾಯಕ ನಟನಾಗಿ ಅಭಿನಯಿಸಿದ ನೀನಾಸಂ ಸತೀಶ ಅವರು, 'ರಾಕೆಟ್' ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಪಕರೂ ಆಗಿದ್ದರು. ಇದೀಗ ನಿರ್ದೇಶನ ಕ್ಷೇತ್ರಕ್ಕೂ ಮುಂದಡಿಯಿಡಲು ಸತೀಶ್ ಸಜ್ಜಾಗಿದ್ದಾರೆ.,
ತಮ್ಮ ನಿರ್ದೇಶನದ ಚಿತ್ರಕ್ಕೆ ಸ್ವತಃ ಸತೀಶ್ ಕಥೆ ಬರೆದಿದ್ದು,. ಇನ್ನೂ ಟೈಟಲ್ ನಿರ್ಧಾರವಾಗಿಲ್ಲ
ಮೂರು ಕಥೆಗಳನ್ನು ಸತೀಶ್ ಬರೆದಿದ್ದು,ಅದರಲ್ಲಿ ಒಂದು ಕಥೆ ಅವರಿಗೆ ತುಂಬಾ ಇಷ್ಟವಾಗಿದೆಯಂತೆ. ಕಥೆ ಕೇಳಿದ ಅವರ 50 ಸ್ನೇಹಿತರು ಕೂಡ ಅದೇ ಕಥೆಯನ್ನೇ ಇಷ್ಟ ಪಟ್ಟಿದ್ದಾರಂತೆ ಹೀಗಾಗಿ ಆ ಕಥೆಯನ್ನೇ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.
ತಮ್ಮ ನಟನೆಯ ಚಂಬಲ್ ಮತ್ತು ಗೋದ್ರಾ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವ ಸತೀಶ್ ತಮಿಳು ಸಿನಿಮಾ ದಲ್ಲೂ ಅಭಿನಯಿಸಿದ್ದಾರೆ.
ಹೊಸವರ್ಷಕ್ಕೆ ತಮ್ಮ ನಿರ್ದೇಶನದ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಬೇಕು ಎಂದುಕೊಂಡಿರುವ ಸತೀಶ್ ಮಾರ್ಚ್ ತಿಂಗಳಿಂದ ಸಿನಿಮಾ ಶೂಟಿಂಗ್ ಆರಂಭಿಸಲು ನಿರ್ಧರಿಸಿದ್ದಾರೆ.