ಡಿಜಿಟಲ್ ಹಕ್ಕು ಮಾರಾಟದಲ್ಲೂ ದಾಖಲೆ ಬರೆದ 'ಕೆಜಿಎಫ್'; ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?

ಇತ್ತೀಚೆಗಷ್ಟೇ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 100 ಕೋಟಿ ಗಳಿಸಿ ಈ ಸಾಧನೆಗೈದ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿ ಪಡೆದಿದ್ದ ಕೆಜಿಎಫ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ಡಿಜಿಟಲ್ ಹಕ್ಕು ಮಾರಾಟದಲ್ಲೂ 'ಕೆಜಿಎಫ್' ದಾಖಲೆ ಬರೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಇತ್ತೀಚೆಗಷ್ಟೇ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 100 ಕೋಟಿ ಗಳಿಸಿ ಈ ಸಾಧನೆಗೈದ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿ ಪಡೆದಿದ್ದ ಕೆಜಿಎಫ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ಡಿಜಿಟಲ್ ಹಕ್ಕು ಮಾರಾಟದಲ್ಲೂ 'ಕೆಜಿಎಫ್' ದಾಖಲೆ ಬರೆದಿದೆ.
ಬಾಹುಬಲಿ, 2.0 ಬಳಿಕ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿರುವ ದಕ್ಷಿಣ ಭಾರತದ ಮತ್ತೊಂದು ಚಿತ್ರ ಕನ್ನಡದ ಕೆಜಿಎಫ್ ಇದೀಗ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ದಾಖಲೆ ಬೆಲೆಗೆ ತನ್ನ ಡಿಜಿಟಲ್ ಹಕ್ಕು ಮಾರಾಟ ಮಾಡಿದೆ. ಬಿಡುಗಡೆಯಾದ ಐದು ಭಾಷೆಗಳಲ್ಲೂ ದಾಖಲೆ ಕಲೆಕ್ಷನ್‌ ಮಾಡಿದ ಕೆಜಿಎಫ್ ಇದೀಗ ಡಿಜಿಟಲ್‌ ಹಕ್ಕು ಮಾರಾಟದಲ್ಲಿ ದಾಖಲೆ ಮಾಡಿರುವುದು ಕನ್ನಡಿಗರಿಗೆ ಹೆಮ್ಮೆ ತರುವಂತಹ ಸಂಗತಿಯಾಗಿದೆ.
ಮಾಧ್ಯಮವೊಂದರ ವರದಿ ಅನ್ವಯ ಚಿತ್ರದ ಆನ್ ಲೈನ್ ಪ್ರಸಾರದ ಹಕ್ಕನ್ನು ಚಿತ್ರ ತಂಡ ಬರೊಬ್ಬರಿ 18 ಕೋಟಿಗೆ ಮಾರಾಟ ಮಾಡಿದೆ ಎನ್ನಲಾಗಿದೆ. ಖ್ಯಾತ ಆನ್ ಲೈನ್ ಶಾಪಿಂಗ್ ತಾಣ ಅಮೇಜಾನ್ ಸಹ ಸಂಸ್ಥೆ ಅಮೆಜಾನ್‌ ಪ್ರೈಮ್‌ ಸಂಸ್ಥೆ ‘ಕೆಜಿಎಫ್‌’ನ ಐದೂ ಭಾಷೆಯ ಚಿತ್ರಗಳನ್ನೂ ಬರೊಬ್ಬರಿ 18 ಕೋಟಿ ರೂ ನೀಡಿ ಖರೀದಿಸಿದೆ ಎನ್ನಲಾಗಿದೆ. 
ಇಷ್ಟೇ ಅಲ್ಲ ದಾಖಲೆ ಮೊತ್ತಕ್ಕೆ ಬಿಕರಿಯಾಗಿದೆ ಚಿತ್ರದ ಸ್ಯಾಟೆಲೈಟ್ ಹಕ್ಕು
ಇನ್ನು ಮೊದಲೆಲ್ಲಾ ಡಿಜಿಟಲ್‌ ಹಕ್ಕು ಮತ್ತು ಸ್ಯಾಟಲೈಟ್‌ ಹಕ್ಕು ಒಂದೇ ಸಂಸ್ಥೆಗೆ ನೀಡುವ ನಿಯಮ ಇತ್ತು ಆದರೆ ಇದೀಗ ಅದು ಬದಲಾಗಿದ್ದು ಡಿಜಿಟಲ್‌ ರೈಟ್‌ ಮತ್ತು ಸ್ಯಾಟಲೈಟ್‌ ಹಕ್ಕು (ಆನ್ ಲೈನ್ ಸ್ಟ್ರೀಮಿಂಗ್, ಟಿವಿ ಪ್ರಸಾರ ಹಕ್ಕು) ಬೇರೆ-ಬೇರೆ ಎನ್ನುವಂತಾಗಿದೆ. ಅಮೆಜಾನ್‌ ಪ್ರೈಮ್‌ ಕೆಜಿಎಫ್‌ ನ ಡಿಜಿಟಲ್‌ ಹಕ್ಕು ಪಡೆದುಕೊಂಡಿದ್ದು, ಕನ್ನಡ ಚಿತ್ರದ ಸ್ಯಾಟಲೈಟ್‌ ಹಕ್ಕನ್ನು ಕಲರ್ಸ್‌ ಕನ್ನಡ ದಾಖಲೆ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ. ಹಾಗೂ ಕೆಜಿಎಫ್‌ನ ಹಿಂದಿ ಅವತರಣಿಕೆಯನ್ನು ಸೋನಿ ಚಾನೆಲ್‌ ಭಾರಿ ಮೊತ್ತಕ್ಕೆ ಖರೀದಿಸಿದೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿದೆ.
ಆ ಮೂಲಕ ಕೇವಲ ಡಿಜಿಟಲ್ ಹಕ್ಕು ಮಾರಾಟದಿಂದಲೇ ಕೆಜಿಎಫ್ ಚಿತ್ರ 40ಕೋಟಿಗೂ ಅಧಿಕ ಹಣ ಗಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com