ಅಂಬರೀಷ್ ಪುತ್ರ ಅಭಿಷೇಕ್ ಗೌಡ ಚೊಚ್ಚಲ ಸಿನಿಮಾಗಾಗಿ ಸಿದ್ದವಾಗಿವೆ 7 ಟೈಟಲ್ ಗಳು!

ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸುಮಲತಾ ದಂಪತಿ ಪುತ್ರ ಅಭಿಷೇಕ್ ಗಾಗಿ ಸಂದೇಶ್ ನಾಗರಾಜ್ ಸಿನಿಮಾ ಮಾಡುತ್ತಿದ್ದು. ಚೇತನ್ ಕುಮಾರ್ ನಿರ್ದೇಶನ ..
ಪುತ್ರನೊಂದಿಗೆ ಅಂಬರೀಷ್ ದಂಪತಿ
ಪುತ್ರನೊಂದಿಗೆ ಅಂಬರೀಷ್ ದಂಪತಿ
ಬೆಂಗಳೂರು:  ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸುಮಲತಾ ದಂಪತಿ ಪುತ್ರ ಅಭಿಷೇಕ್ ಗಾಗಿ ಸಂದೇಶ್ ನಾಗರಾಜ್ ಸಿನಿಮಾ ಮಾಡುತ್ತಿದ್ದು. ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ ಅಭಿಷೇಕ್ ಚೊಚ್ಚಲ ಸಿನಿಮಾ ಅಬಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಅಭಿಷೇಕ್ ಸಿನಿಮಾಗಾಗಿ 7 ಟೈಟಲ್ ಗಳನ್ನು ಸಿದ್ಧ ಪಡಿಸಲಾಗಿದೆ, ಜಲೀಲ, ನಾಗರಹಾವು, ಅಮರ್, ತಿರುಗುಬಾಣ ಹೆಸರುಗಳು ಕೇಳಿ ಬರುತ್ತಿವೆ, ಅಂಬರೀಷ್ ನಟಿಸಿರುವ ಸಿನಿಮಾ ಟೈಟಲ್ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. 7 ಸಿನಿಮಾ ಟೈಟಲ್ ಗಳು ಅಭಿಷೇಕ್ ಮುಂದಿದ್ದು ಇನ್ನೂ ಯಾವುದೇ ಟೈಟಲ್ ಫೈನಲ್ ಆಗಿಲ್ಲ.
ಅಭಿಷೇಕ್ ಮತ್ತು ಅಂಬರೀಷ್ ದಂಪತಿಯೊಂದಿಗೆ ಚರ್ಚಿಸಿ ಟೈಟಲ್ ಫೈನಲ್ ಮಾಡಲು ಸಿನಿಮಾ ತಯಾರಕರು ನಿರ್ಧರಿಸಿದ್ದಾರೆ.
ಬಹದ್ದೂರ್ ಮತ್ತು ಭರ್ಜರಿ ಸಿನಿಮಾ ನಿರ್ದೇಶಿಸಿರುವ ಚೇತನ್ ಅಭಿಷೇಕ್ ಸಿನಿಮಾಗಾಗಿ ಕಥೆ ಮತ್ತು ಸಂಭಾಷಣೆ ಬರೆಯುವುದರಲ್ಲಿ ಮಗ್ನರಾಗಿದ್ದಾರೆ. ಅಭಿಷೇಕ್ ಕೂಡ ಕ್ಯಾಮೆರಾ ಮುಂದೆ ನಟಿಸಲು  ಸಜ್ಜಾಗಿದ್ದು ಮಾರ್ಚ್ ನಲ್ಲಿ ಸಿನಿಮಾ ಸೆಟ್ಟೇರಲಿದೆ.
ಐರಾವತ ನಂತರ ಸಂದೇಶ್ ನಾಗರಾಜ್ ಅಂಬರೀಷ್ ಪುತ್ರನಿಗಾಗಿ ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com