ಚಿತ್ರಕಥೆಯೇ ಟಗರು ಚಿತ್ರದ ಜೀವಾಳ: ನಿರ್ದೇಶಕ ಸೂರಿ

ಟಗರು ಚಿತ್ರದ ಕೆಲಸವನ್ನು ಮುಗಿಸುವ ಹಂತದಲ್ಲಿದ್ದಾರೆ ನಿರ್ದೇಶಕ ಸೂರಿ.ಚಿತ್ರದ ಬಿಡುಗಡೆಗೆ ಸಿದ್ಧತೆ ...
ಶಿವರಾಜ್ ಕುಮಾರ್ ನಟನೆಯ ಟಗರು ಚಿತ್ರದ ಪೋಸ್ಟರ್
ಶಿವರಾಜ್ ಕುಮಾರ್ ನಟನೆಯ ಟಗರು ಚಿತ್ರದ ಪೋಸ್ಟರ್
Updated on: 

ಟಗರು ಚಿತ್ರದ ಕೆಲಸವನ್ನು ಮುಗಿಸುವ ಹಂತದಲ್ಲಿದ್ದಾರೆ ನಿರ್ದೇಶಕ ಸೂರಿ.ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ನಿರ್ದೇಶಕರು ಇತ್ತೀಚೆಗೆ ಟೆಕ್ನಿಷಿಯನ್ ಗಳ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಚಿತ್ರ ಬಿಡುಗಡೆಗೆ ಮುನ್ನ ಶುಕ್ರವಾರ ತೆರೆ ಕಾಣುವ ಮುಂಚೆ ನಮ್ಮ ತಾಯಿ ಪರದೆಗೆ ಪೂಜೆ ಸಲ್ಲಿಸುತ್ತಾರೆ. ಈ ಬಾರಿ ನಾನು ಕೂಡ ಬೆಳಗ್ಗೆಯೇ ಹೋಗಬೇಕು ಏಕೆಂದರೆ ಬೆಳಗ್ಗೆ 7 ಗಂಟೆಗೆ ಚಿತ್ರ ತೆರೆ ಕಾಣಲಿದೆ ಎಂದರು.

ಟಗರು ಚಿತ್ರದ ಬಗ್ಗೆ ಜನರ ಕುತೂಹಲ, ಸಂಭ್ರಮ ಬಗ್ಗೆ ಸೂರಿ ಖುಷಿಯಾಗಿದ್ದಾರೆ. ಆದರೆ ಇವರು ಹಿಂದಿನ ಸಾಂಪ್ರದಾಯಿಕ 10.30ರ ಶೋ, 1.30, 4.30  ಮತ್ತು 7.30ರ ಶೋವನ್ನು ಇಷ್ಟಪಡುತ್ತಾರಂತೆ. ಅಲಂಕರಿಸಿದ ಹೂವು ಸಾಯಂಕಾಲದಲ್ಲಿ ಒಣಗಿ ಉದುರಿದಾಗ ಹೂವನ್ನು ಕಟ್ಟಿದ ಹಗ್ಗ ಮಾತ್ರ ಹಾಗೆಯೇ ಇರುತ್ತದೆ. ಚಿತ್ರ ಬಿಡುಗಡೆಯ ಫ್ರೆಶ್ ನೆಸ್ ಶುಕ್ರವಾರ, ಶನಿವಾರ ಮತ್ತು ಭಾನುವಾರದವರೆಗೆ ಇರುತ್ತದೆ.ಸೋಮವಾರವಾಗುವಾಗ ಚಿತ್ರ ಪ್ರೇಕ್ಷಕನಿಗೆ ಇಷ್ಟವಾಗಿದೆಯೇ, ಇಲ್ಲವೇ ಎಂದು ಗೊತ್ತಾಗುತ್ತದೆ ಎನ್ನುತ್ತಾರೆ.ಮೊದಲ ದಿನದ ಮೊದಲ ಶೋವಲ್ಲಿ ಪ್ರೇಕ್ಷಕರ ಮತ್ತು ಅಭಿಮಾನಿಗಳ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಲು ಕಾತರರಾಗಿದ್ದಾರೆ.

ಟಗರು ಚಿತ್ರದಲ್ಲಿ 150  ಮಂದಿ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಚಿತ್ರಕಥೆಯೇ ಟಗರಿನ ಜೀವಾಳ, ಎಂದರು ಸೂರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com