ಸಾಹಸ ನಿರ್ದೇಶಕ ರವಿವರ್ಮ ಚಿತ್ರಕ್ಕೆ ಏಪ್ರಿಲ್ 24ಕ್ಕೆ ಮುಹೂರ್ತ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಮತ್ತು ಬಾಲಿವುಡ್ ನಲ್ಲಿ ಸ್ಟಂಟ್ ಮಾಸ್ಟರ್ ಆಗಿ ಹೆಸರು ಮಾಡಿರುವ ರವಿವರ್ಮ...
ಶಿವರಾಜ್ ಕುಮಾರ್ ಮತ್ತು ರವಿವರ್ಮ
ಶಿವರಾಜ್ ಕುಮಾರ್ ಮತ್ತು ರವಿವರ್ಮ
Updated on

ದಕ್ಷಿಣ ಭಾರತ ಚಿತ್ರರಂಗದಲ್ಲಿ ಮತ್ತು ಬಾಲಿವುಡ್ ನಲ್ಲಿ ಸ್ಟಂಟ್ ಮಾಸ್ಟರ್ ಆಗಿ ಹೆಸರು ಮಾಡಿರುವ ರವಿವರ್ಮ, ಕನ್ನಡದಲ್ಲಿ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ, ರುಸ್ತಮ್ ಎಂದು ಸಿನಿಮಾಕ್ಕೆ ಹೆಸರಿಡಲಾಗಿದ್ದು ಜಯಣ್ಣ ಕಂಬೈನ್ಸ್ ನಡಿ ನಿರ್ಮಾಣಗೊಳ್ಳುತ್ತಿದೆ. ನಾಯಕನಾಗಿ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಚಿತ್ರದ ಪೂರ್ವ ತಯಾರಿ ಹಂತ ನಡೆಯುತ್ತಿದ್ದು ಏಪ್ರಿಲ್ 24ರಂದು ಚಿತ್ರದ ಮುಹೂರ್ತ ನೆರವೇರಲಿದೆ. ಅಂದು ಡಾ.ರಾಜ್ ಕುಮಾರ್ ಅವರ ಜನ್ಮದಿನ. ಶೂಟಿಂಗ್ ಮೇಯಲ್ಲಿ ಆರಂಭವಾಗಲಿದೆ.

ಈ ಮಧ್ಯೆ ರವಿವರ್ಮ ಚಿತ್ರದ ತಾಂತ್ರಿಕ ಸಿಬ್ಬಂದಿಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಅನೂಪ್ ಸೀಳಿನ್ ಅವರ ಸಂಗೀತ ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ.

ಆರೆಂಜ್ ಚಿತ್ರದ ಸಾಹಸ ದೃಶ್ಯಗಳ ಸನ್ನಿವೇಶಗಳ ಚಿತ್ರೀಕರಣದಲ್ಲಿ ರವಿವರ್ಮ ಬ್ಯುಸಿಯಾಗಿದ್ದಾರೆ.ಪ್ರಶಾಂತ್ ರಾಜ್ ನಿರ್ದೇಶನದ ಗಣೇಶ್ ಮತ್ತು ಪ್ರಿಯಾ ಆನಂದ್ ನಟನೆಯ ಆರೆಂಜ್ ಚಿತ್ರ ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com