ವೆಲ್ ಕಮ್ ಟು ಮಲ್ಲು ಫ್ಯಾಮಿಲಿ: ಪ್ರಿಯಾಂಕಾಗೆ ಮೋಹನ್ ಲಾಲ್ ಸ್ವಾಗತ

ಮಲಯಾಳಂನ ರೋಶನ್ ಆಂಡ್ರೂಸ್ ನಿರ್ದೇಶನದ ಕಯಾಮುಕುಲಂ ಕೊಚುನ್ನಿ ಚಿತ್ರಕ್ಕಾಗಿ ಪ್ರಿಯಾಂಕ ಸಹಿ ಮಾಡಿದ್ದಾರೆ. ಇದು 19ನೇ ಶತಮಾನದ ಚಿತ್ರದ ಕಥೆಯಾಧಾರಿತ ...
ಪ್ರಿಯಾಂಕಾ ತಿಮ್ಮೇಶ್
ಪ್ರಿಯಾಂಕಾ ತಿಮ್ಮೇಶ್
ಬೆಂಗಳೂರು:  ಕನ್ನಡದಿಂದ ಪರಭಾಷಾ ಚಿತ್ರರಂಗಕ್ಕೆ ಹಾರುವ ನಟಿಮಣಿಯರ ಸಾಲಿಗೆ ಹೊಸ ಸೇರ್ಪಡೆ ಪ್ರಿಯಾಂಕಾ ತಿಮ್ಮೇಶ್. ‘ಗಣಪ’ ಚಿತ್ರದಲ್ಲಿ ನಾಯಕಿಯಾಗಿ, ‘ಪಟಾಕಿ‘ಯಲ್ಲಿ ಗಣೇಶ್​ಗೆ ತಂಗಿಯಾಗಿ  ನಟಿಸಿರುವ ಪ್ರಿಯಾಂಕಾ ಸದ್ಯ ಮಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ. 
ಮಲಯಾಳಂನ ರೋಶನ್ ಆಂಡ್ರೂಸ್ ನಿರ್ದೇಶನದ ಕಯಾಮುಕುಲಂ ಕೊಚುನ್ನಿ ಚಿತ್ರಕ್ಕಾಗಿ ಪ್ರಿಯಾಂಕ ಸಹಿ ಮಾಡಿದ್ದಾರೆ. ಇದು 19ನೇ ಶತಮಾನದ ಚಿತ್ರದ ಕಥೆಯಾಧಾರಿತ ಚಿತ್ರವಾಗಲಿದ್ದು ಮಾಲಿವುಡ್ ನ ನಟ ನವೀನ್ ಪೌಲಿ ಮತ್ತು ಪ್ರಿಯಾ ಆನಂದ್ ಜತೆ ಪ್ರಿಯಾಂಕ ಪರದೆ ಹಂಚಿಕೊಂಡಿದ್ದಾರೆ,
ಇನ್ನೂ ಇದೇ ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ಮೋಹನ್ ಲಾಲ್ ಮತ್ತು ರೋಶನ್ ಕಾಂಬಿನೇಷನ್ ನ 4ನೇ ಚಿತ್ರ ಇದಾಗಿದೆ, ಈ ಸಿನಿಮಾದ ಎಲ್ಲಾ ಪಾತ್ರಧಾರಿಗಳು ಮೋಹನ್ ಲಾಲ್ ಜೊತೆ ಪರದೆ ಹಂಚಿಕೊಂಡಿದ್ದಾರೆ. 
ಇದೇ ಮೊದಲ ಬಾರಿಗೆ ನಾನು ಇಷ್ಟು ದೊಡ್ಡ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ನೋಡಿದ್ದು, ಅವರನ್ನು ನೋಡಿದ ಮೇಲೆ ನನ್ನ ಉತ್ಸಾಹ ಇಮ್ಮಡಿಯಾಯಿತು, ನನ್ನನ್ನು ಒಳ್ಳೆಯ ಮನಸ್ಸಿನ ಹುಡುಗಿ ಎಂದು ಹೇಳಿದರು. ಅವರ ಆ ಮಾತುಗಳು ನನ್ನಲ್ಲಿ ಮತ್ತಷ್ಟು ಸಂತೋಷ ತಂದಿತು ಎಂದು ಹೇಳಿದ್ದಾರೆ.
ಸೌಂದರ್ಯ ಮೀನಾ ರಂತ ನಟಿಯರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವಂತೆ ಮೋಹನ್ ಲಾಲ್ ನನಗೆ ಸಲಹೆ ನೀಡಿದರು. ಜೊತೆಗೆ ವೆಲ್ ಕಮ್ ಟು ಮಲ್ಲು ಫ್ಯಾಮಿಲಿ ಎಂದು ಸ್ವಾಗತಿಸಿದರು ಎಂದು ಪ್ರಿಯಾಂಕಾ ತಿಳಿಸಿದ್ದಾರೆ,
ಬಾಹುಬಲಿ, ಪದ್ಮಾವತ್ ಸಿನಿಮಾ ರೀತಿ ಈ ಪ್ರಾಜೆಕ್ಟ್ ಕೂಡ ಇದೆ,  ಇಂತಹ ಸಿನಿಮಾದ ಭಾಗವಾಗಿರುವುದು ನನ್ನ ಅದೃಷ್ಟ ಎಂದು ಹೇಳಿರುವ ಪ್ರಿಯಾಂಕ ಕನ್ನಡದ ಭೀಮ ಸೇನ ನಳಮಹಾರಾಜ, ಜಾನ್ ಸೀನಾ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com