ಲೈಂಗಿಕ ಕಿರುಕುಳ ಆರೋಪದ ಮೇಲೆ ತೆಲುಗು ಗಾಯಕ ಗಜಲ್ ಶ್ರೀನಿವಾಸ್ ಬಂಧನ

ಲೈಂಗಿಕ ಕಿರುಕು ನೀಡಿದ ಆರೋಪದ ಮೇಲೆ ತೆಲುಗು ಗಾಯಕ ಕೇಸಿರಾಜು ಶ್ರೀನಿವಾಸ್ ಅವರನ್ನು ಮಂಗಳವಾರ ಪೊಲೀಸರು...
ಗಜಲ್ ಶ್ರೀನಿವಾಸ್
ಗಜಲ್ ಶ್ರೀನಿವಾಸ್
Updated on: 
ಹೈದರಾಬಾದ್: ಲೈಂಗಿಕ ಕಿರುಕು ನೀಡಿದ ಆರೋಪದ ಮೇಲೆ ತೆಲುಗು ಗಾಯಕ ಕೇಸಿರಾಜು ಶ್ರೀನಿವಾಸ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ರೆಡಿಯೋ ಜ್ಯಾಕಿಯಾಗಿರುವ ಮಹಿಳೆಯೊಬ್ಬರು ಗಜಲ್ ಶ್ರೀನಿವಾಸ್ ಎಂದೇ ಖ್ಯಾತಿ ಪಡೆದಿದ್ದ ಕೇಸಿರಾಜು ಶ್ರೀನಿವಾಸ್ ಅವರ ವಿರುದ್ಧ ಡಿಸೆಂಬರ್ 29ರಂದು ಪೊಲೀಸರಿಗೆ ದೂರು ನೀಡಿದ್ದರು.
ತೆಲುಗು ಗಜಲ್ ಗಾಯಕ ಶ್ರೀನಿವಾಸ್ ಅವರು ಕಳೆದ ಒಂಬತ್ತು ತಿಂಗಳಿಂದ ತನಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಬಾರಿಗೆ ಅತಿ ಹೆಚ್ಚು(76) ಭಾಷೆಗಳಲ್ಲಿ ಹಾಡುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದ ಗಾಯಕ ಶ್ರೀನಿವಾಸ್ ಅವರು ಮಹಿಳೆಯ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ತಾವು ಯಾವತ್ತೂ ಆ ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com