ಪುಟ್ಟಗೌರಿ ಖ್ಯಾತಿಯ ನಟಿ ರಂಜನಿ ರಾಘವನ್ ಮುಡಿಗೆ 2017 ಮಿಸ್ ಇಂಡಿಯಾ ಸೂಪರ್ ಮಾಡಲ್ ಪ್ರಶಸ್ತಿ

ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ನಟಿ ರಂಜನಿ ರಾಘವನ್ ಇದೀಗ ಮತ್ತೊಂದು ಕೀರ್ತಿಗೆ ಭಾಜನರಾಗಿದ್ದು, 2017ನೇ ಸಾಲಿನ ಮಿಸ್ ಇಂಡಿಯಾ ಸೂಪರ್ ಮಾಡಲ್ ಸ್ಪರ್ಧೆಗೆ ಸ್ಪರ್ಧಿಸಿ ಪ್ರಶಸ್ತಿ ಜಯಿಸಿದ್ದಾರೆ.
ನಟಿ ರಂಜನಿ ರಾಘವನ್ (ಫೇಸ್ ಬುಕ್ ಚಿತ್ರ)
ನಟಿ ರಂಜನಿ ರಾಘವನ್ (ಫೇಸ್ ಬುಕ್ ಚಿತ್ರ)
Updated on: 
ಬೆಂಗಳೂರು: ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ನಟಿ ರಂಜನಿ ರಾಘವನ್ ಇದೀಗ ಮತ್ತೊಂದು ಕೀರ್ತಿಗೆ ಭಾಜನರಾಗಿದ್ದು, 2017ನೇ ಸಾಲಿನ ಮಿಸ್ ಇಂಡಿಯಾ  ಸೂಪರ್ ಮಾಡಲ್ ಸ್ಪರ್ಧೆಗೆ ಸ್ಪರ್ಧಿಸಿ ಪ್ರಶಸ್ತಿ ಜಯಿಸಿದ್ದಾರೆ.
ಈ ಬಗ್ಗೆ ಅವರ ಫೇಸ್ ಬುಕ್ ಫ್ಯಾನ್ಸ್ ಪೇಜ್ ನಲ್ಲಿ ಸುದ್ದಿ ಮತ್ತು ಫೋಟೋಗಳು ಹರಿದಾಡುತ್ತಿದ್ದು, ಫೇಸ್ ಬುಕ್ ನಲ್ಲಿರುವಂತೆ ಸಿಲ್ವರ್ ಸ್ಟಾರ್ ಫಿಲ್ಮ್ ಮೇಕರ್ಸ್ ಸ್ಕೂಲ್ ಆಫ್ ಫ್ಯಾಷನ್ ವತಿಯಿಂದ ಆಯೋಜಿತವಾಗಿದ್ದ ‘ಮಿಸ್ಟರ್ ಅಂಡ್ ಮಿಸ್ ಸೂಪರ್ ಮಾಡೆಲ್ 2017’ರಲ್ಲಿ ಭಾಗವಹಿಸಿದ್ದ ರಂಜನಿ ರಾಘವನ್ @RanjaniRaghavanOfficial ಮಹಿಳಾ ವಿಭಾಗದ ಮೊದಲ ಸ್ಥಾನದಲ್ಲಿ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಈ ಸ್ಫರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಹಲವು ಮಾಡೆಲ್ ಗಳು ಭಾಗವಹಿಸಿದ್ದರು. ಈ ಪೈಕಿ ಕರ್ನಾಟಕದ ರಂಜನಿ ರಾಘವನ್ ಮಿಸ್ ಇಂಡಿಯಾ ಸೂಪರ್ ಮಾಡೆಲ್ 2017 ಅವಾರ್ಡ್ ಅನ್ನು ಗೆಲ್ಲುವ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
ರಂಜನಿ ಅವರನ್ನು ಹೊರತು ಪಡಿಸಿದರೆ ಇತರೆ ಸ್ಪರ್ಧಿಗಳ ಪೈಕಿ ಐಶ್ವರ್ಯ ಮೊದಲನೇ ರನ್ನರ್ ಅಪ್ ಹಾಗೂ ‌ಅನಿತಾ ಎರಡನೇ ರನ್ನರ್ ಅಪ್ ಸ್ಥಾನಗಳನ್ನು ಪಡೆದುಕೊಂಡರು. ಆದರೆ ಈ ಬಗ್ಗೆ ನಟಿ ರಂಜನಿ ರಾಘವನ್ ತಮ್ಮ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ಈ ಹಿಂದೆ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿನ 'ಸಾಹಸಮಯ' ದೃಶ್ಯಗಳಿಂದಾಗಿ ಟ್ರೋಲ್ ಪೇಜ್ ಗಳ ಆಹಾರವಾಗಿದ್ದ ರಂಜನಿ, ಬಳಿಕ ರಾಜಹಂಸ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದರು. ರಂಜನಿ ನಟನೆಯ  ಹೊರತಾಗಿಯೂ ಸಾಕಷ್ಟು ಪ್ರತಿಭೆ ಹೊಂದಿದ್ದು, ಸ್ವತಃ ಹಿನ್ನಲೆ ಗಾಯಕರೂ ಆಗಿದ್ದಾರೆ. ರಂಜನಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದು ಅವರ ಮೊದಲ ಚಿತ್ರದಲ್ಲೇ ಹಾಡೊಂದನ್ನ ಹಾಡಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com