ಕುಡಿದು ಕಾರು ಚಾಲನೆ: ತೆಲುಗು ನಟ ಪ್ರದೀಪ್ ಮಾಚಿರಾಜು ತಪ್ಪಿತಸ್ಥ

ಕುಡಿದು ಕಾರು ಚಾಲನೆ ಮಾಡಿದ ಪ್ರಕರಣದಲ್ಲಿ ತೆಲುಗು ನಟ ಹಾಗೂ ಖ್ಯಾತ ಟಿವಿ ನಿರೂಪಕ ಪ್ರದೀಪ್ ಮಾಚಿರಾಜು ಅವರು ತಪ್ಪಿತಸ್ಥ...
ಪ್ರದೀಪ್ ಮಾಚಿರಾಜು
ಪ್ರದೀಪ್ ಮಾಚಿರಾಜು
Updated on
ಹೈದರಾಬಾದ್: ಕುಡಿದು ಕಾರು ಚಾಲನೆ ಮಾಡಿದ ಪ್ರಕರಣದಲ್ಲಿ ತೆಲುಗು ನಟ ಹಾಗೂ ಖ್ಯಾತ ಟಿವಿ ನಿರೂಪಕ ಪ್ರದೀಪ್ ಮಾಚಿರಾಜು ಅವರು ತಪ್ಪಿತಸ್ಥ ಎಂದು ಹೈದರಾಬಾದ್ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ಪ್ರದೀಪ್ ಅವರು ಕಳೆದ ಡಿಸೆಂಬರ್ 31ರ ರಾತ್ರಿ ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದ ವೇಳೆ ಮದ್ಯ ಸೇವಿಸಿದ ಅವಸ್ಥೆಯಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಜುಬ್ಲಿ ಹಿಲ್ಸ್ ಪೊಲೀಸರು ನಟನ ವಿರುದ್ಧ ಡ್ರಿಂಕ್ ಆಂಡ್ ಡ್ರೈವ್ ಕೇಸ್ ದಾಖಲಿಸಿ, ಕಾರು ವಶಕ್ಕೆ ಪಡೆದಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಆರೋಪಿ ನಟ ತಪ್ಪಿತಸ್ಥ ಎಂದು ತೀರ್ಪು ನೀಡಿ, 2,100 ರುಪಾಯಿ ದಂಡ ವಿಧಿಸಲಾಗಿದೆ. ಅಲ್ಲದೆ ಪ್ರದೀಪ್ ಮಾಚಿರಾಜು ಚಾಲನಾ ಪರವಾನಗಿಯನ್ನು ಮೂರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com