'ಜಂಟಲ್ ಮೆನ್' ಆದ ಪ್ರಜ್ವಲ್ ದೇವರಾಜ್

ನಾಯಕ ನಟ ಪ್ರಜ್ವಲ್ ದೇವರಾಜ್ ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ...
ಪ್ರಜ್ವಲ್ ದೇವರಾಜ್
ಪ್ರಜ್ವಲ್ ದೇವರಾಜ್
ನಾಯಕ ನಟ ಪ್ರಜ್ವಲ್ ದೇವರಾಜ್ ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರ ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. 
ಇನ್ನೊಂದೆಡೆ ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ ರಾಜಹಂಸ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಜಂಟಲ್ ಮೆನ್ ನ ಫಸ್ಟ್ ಲುಕ್ ನಾಳೆ ಬಿಡುಗಡೆಯಾಗಲಿದೆ. ನಿದ್ದೆಯ ಅಸ್ವಸ್ಥತೆ ಬಗ್ಗೆ ಕಥೆಯಿರುವ ಚಿತ್ರದ ಟ್ಯಾಗ್ ಲೈನ್ ಒಳಗೊಬ್ಬ ರಾಕ್ಷಸ ಕುಂಭಕರ್ಣ ಎಂಬುದಾಗಿದೆ.
ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು ರವಿ ಬಸ್ರೂರ್ ಸಂಗೀತ ಮತ್ತು ಜಗದೀಶ್ ವಾಲಿಯವರ ಛಾಯಾಗ್ರಹಣ ಚಿತ್ರಕ್ಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com