'ಡಬಲ್ ಎಂಜಿನ್' ಚಿತ್ರದ ಕಾಮಿಡಿ ಪಾತ್ರದಲ್ಲಿ ಸುಮನ್ ರಂಗನಾಥ್

ಬಹುಮುಖ ಪ್ರತಿಭೆಯಳ್ಳ ಸುಮನ್ ರಂಗನಾಥ್ ವೈವಿಧ್ಯಮಯ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ಡಬಲ್ ಎಂಜಿನ್ ಎಂಬ ಚಿತ್ರದಲ್ಲಿ ಕಾಮಿಡಿ ರೋಲ್ ನಲ್ಲಿ...
ಸುಮನ್ ರಂಗನಾಥ್
ಸುಮನ್ ರಂಗನಾಥ್
ಬೆಂಗಳೂರು: ಬಹುಮುಖ ಪ್ರತಿಭೆಯಳ್ಳ ಸುಮನ್ ರಂಗನಾಥ್ ವೈವಿಧ್ಯಮಯ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ಡಬಲ್ ಎಂಜಿನ್ ಎಂಬ ಚಿತ್ರದಲ್ಲಿ  ಕಾಮಿಡಿ ರೋಲ್ ನಲ್ಲಿ ಸುಮನ್ ನಟಿಸಲಿದ್ದಾರೆ.
ಕಾಮಿಡಿ ಪಾತ್ರ ಮಾಡುವ ಬಗ್ಗೆ ನಾನು ಎರಡನೇ ಬಾರಿ ಯೋಚನೆ ಮಾಡಲೇ ಇಲ್ಲ, ಸಿನಿಮಾದಲ್ಲಿ  ಹಾಸ್ಯದ ಅವಶ್ಯಕತೆ ಇದ್ದರೇ ಅದನ್ನು ಮಾಡುವುದರಲ್ಲಿ ತಪ್ಪಿಲ್ಲ, ಇದೇ ಮೊದಲ ಬಾರಿಗೆ ಡಬಲ್ ಎಂಜಿನ್ ಸಿನಿಮಾದಲ್ಲಿ ಸುಮನ್ ಕಾಮಿಡಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಚಂದ್ರ ಮೋಹನ್ ಕಥೆ ಹೇಳಿದಾಗ, ನಾನು ತುಂಬಾ ಥ್ರಿಲ್ ಆದೆ, ಎರಡನೇ ಮಾತಿಲ್ಲದೇ ಚಿತ್ರಕ್ಕೆ ಒಪ್ಪಿದೆ,ಶೂಟಿಂಗ್ ನಿಜವಾಗಿಯೂ ತಮಾಷೆಯಾಗಿತ್ತು. ಎಂದು ಸಮುನ್ ರಂಗನಾಥ್ ಹೇಳಿದ್ದಾರೆ.
ಡಬಲ್ ಎಂಜಿನ್ ಚಿತ್ರದಲ್ಲಿ ಸುಮನ್ ರದ್ದು ವಿಧವೆ ಪಾತ್ರ, ಸಾಧು ಕೋಕಿಲ, ಚಿಕ್ಕಣ್ಣ ಮತ್ತು ಪ್ರಭು ಅಶೋಕ್ ಮತ್ತು ಪ್ರಿಯಾಂಕಾ ಮಲ್ನಾಡಿ ನಟಿಸಿದ್ದಾರೆ. ಅವರು ನಾಲ್ವರು ಉತ್ತಮ ಹಾಸ್ಯ ಕಲಾವಿದರು, ನಾನು ಕೂಡ ಹಾಸ್ಯಪಾತ್ರವನ್ನು ಉತ್ತಮವಾಗಿಯೇ ಅಭಿನಯಿಸಿದ್ದೇನೆ,ಆದರೆ  ನಿಮ್ಮ ಬಾಡಿ ಲ್ಯಾಂಗ್ವೇಜ್ ಬಗ್ಗೆ ತುಂಬಾ ಜಾಗರೂಕರಾದರೇ ಹಾಗೂ ಭಯ ಪಟ್ಟರೆ ಹಾಸ್ಯ ನಿರರ್ಗಳವಾಗಿ ಬರುವುದಿಲ್ಲ, ನಾನು ಈ ಹಾಸ್ಯ ಪಾತ್ರವನ್ನು ಉತ್ತಮವಾಗಿ ಮಾಡಿದ್ದೇನೆ ಎಂಬ ಆತ್ಮ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಡಬಲ್ ಎಂಜಿನ್ ಟೈಮ್ ಪಾಸ್ ಸಿನಿಮಾ, ಚಂದ್ರ ಮೋಹನ್ ಸುಮನ್ ಮನವೊಲಿಸಲು ಬಹಳ ಪ್ರಯತ್ನ ಪಟ್ಟಿದ್ದಾರೆ, ಈ ಮೊದಲು ಬಾಂಬೆ ಮಿಠಾಯಿ ಸಿನಿಮಾವನ್ನು ಕೂಡ ಉತ್ತಮವಾಗಿ ನಿರ್ದೇಶಿಸಿದ್ದಾರೆ,  ಪ್ರಧಾನ ಕಲಾವಿದರು ಹಾಸ್ಯ ಪಾತ್ರ ಮಾಡಿದಾಗ ಸಿನಿಮಾ ಮತ್ತೊಂದು ಹಂತಕ್ಕೆ ತಲುಪುತ್ತದೆ. 
ನಾನು ತುಂಬಾ ಸುಲಭವಾಗಿ ನಗುವುದಿಲ್ಲ, ನಾನು ಹಲವು ವೇಳೆ ಸ್ಟಾಂಡ್ ಅಪ್ ಕಾಮಿಡಿ ಮತ್ತು ಫನ್ನಿ ಚಿತ್ರಗಳನ್ನು ನೋಡುವಾಗ ಅವು ನನಗೆ ನಗುವಂತೆ ಪ್ರಚೋದಿಸುವುದಿಲ್ಲ, ಸೂಕ್ತ ಸಮಯದಲ್ಲಿ ಸೂಕ್ತ ಪ್ರತಿಕ್ರಿಯೆ ನನ್ನ ಗಮನ ಕೇಂದ್ರೀಕರಿಸುತ್ತವೆ, ಸಾಧು ಕೋಕಿಲಾ ಕಾಮಿಡಿ ಸೂಪರ್, ಚಿಕ್ಕಣ್ಣ ಗುಡ್, ಅವರಿಬ್ಬರ ಜೊತೆ ನಾನು ನಟಿಸಿದ್ದೇನೆ,ಅಮಿತಾಬ್ ಬಚ್ಚನ್ ಕಾಮಿಡಿ ಟೈಮ್ ಗ್ರೇಟ್, ಶ್ರೀದೇವಿ ಕೂಡ ಕಾಮಿಕಲ್ ಎಕ್ಸ್ ಪ್ರೆಶನ್ ತುಂಬಾ ಚೆನ್ನಾಗಿ ನೀಡುತ್ತಾರೆ ಎಂದು ಸುಮನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com