ಗ್ರಾಮಪಂಚಾಯಿತಿ ಸದಸ್ಯರ ಪ್ರತಿಭಟನೆಗೆ ಮಣಿದ ಸಿನಿಮಾ ತಂಡ: ಅಯೋಗ್ಯನ ಟ್ಯಾಗ್ ಲೈನ್ ಗೆ ಕತ್ತರಿ!

ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟಿಸಿರುವ ಅಯೋಗ್ಯ ಚಿತ್ರದ ಟ್ಯಾಗ್ ಲೈನ್ ವಿರುದ್ಧ ಗ್ರಾಮಪಂಚಾಯಿತಿ ಸದಸ್ಯರು ನಡೆಸಿದ್ದ ಪ್ರತಿಭಟನೆಗೆ ಕೊನೆಗೂ ಚಿತ್ರತಂಡ ಮಣಿದಿದ್ದು, ಟ್ಯಾಗ್ ಲೈನ್...
ಅಯೋಗ್ಯ
ಅಯೋಗ್ಯ
Updated on: 
ಬೆಂಗಳೂರು: ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟಿಸಿರುವ ಅಯೋಗ್ಯ ಚಿತ್ರದ ಟ್ಯಾಗ್ ಲೈನ್ ವಿರುದ್ಧ ಗ್ರಾಮಪಂಚಾಯಿತಿ ಸದಸ್ಯರು ನಡೆಸಿದ್ದ ಪ್ರತಿಭಟನೆಗೆ ಕೊನೆಗೂ  ಚಿತ್ರತಂಡ ಮಣಿದಿದ್ದು, ಟ್ಯಾಗ್ ಲೈನ್ ಗೆ ಕತ್ತರಿ ಹಾಕಿದೆ. 
ಅಯೋಗ್ಯ ಚಿತ್ರಕ್ಕೆ ಗ್ರಾಮಪಂಚಾಯಿತಿ ಸದಸ್ಯ ಎಂಬ ಟ್ಯಾಗ್ ಲೈನ್ ಇದ್ದದ್ದು ಚುನಾಯಿತ ಗ್ರಾಮಪಂಚಾಯಿತಿ ಸದಸ್ಯರು ತೀವ್ರ ಅಸಮಾಧಾನಗೊಂಡಿದ್ದರು.  ಅಷ್ಟೇ ಅಲ್ಲದೇ ಟ್ಯಾಗ್ ಲೈನ್ ನ್ನು ವಿರೋಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು. 
ಟ್ಯಾಗ್ ಲೈನ್ ಹಾಗೂ ಶೀರ್ಷಿಕೆಗೆ ಸಂಬಂಧಿಸಿದಂತೆ  ಚಿತ್ರತಂಡ ಅಯೋಗ್ಯ ಹಾಗೂ ಗ್ರಾಮಪಂಚಾಯಿತಿ ಸದಸ್ಯರು ಎಂದು ಬದಲಾವಣೆ ಮಾಡಲಾಗುವುದೆಂದು ಹೇಳಿತ್ತು. ಆದರೆ ಪಟ್ಟು ಬಿಡದ ಗ್ರಾಮಪಂಚಾಯಿತಿ ಸದಸ್ಯರು ಟ್ಯಾಗ್ ಲೈನ್ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಟ್ಯಾಗ್ ಲೈನ್ ಬದಲಾವಣೆ ಮಾಡುವುದಾಗಿ ಚಿತ್ರ ತಂಡ ಹೇಳಿದೆ.  
ಗ್ರಾಮಪಂಚಾಯಿತಿ ಸದಸ್ಯರ ಬಗ್ಗೆ ನಮಗೆ ಗೌರವವಿದೆ ಅವರ ಗೌರವಕ್ಕೆ ಧಕ್ಕೆ ತರುವಂತಹ ಅಂಶಗಳು ಸಿನಿಮಾದಲ್ಲಿ ಇಲ್ಲ. ಗ್ರಾಮಪಂಚಾಯಿತಿ ಸದಸ್ಯರು ಹೆಮ್ಮೆ ಪಡುವ ವಿಷಯ ಸಿನಿಮಾದಲ್ಲಿದೆ ಎಂದು ನಿರ್ದೇಶಕ ಮಹೇಶ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com