ಸೇಕ್ರೆಡ್ ಗೇಮ್ಸ್ ವಿವಾದ: ಸಂಭಾಷಣೆಗಳಿಗೆ ನಟರು ಹೊಣೆಯಲ್ಲ- ಹೈಕೋರ್ಟ್

ಚಿತ್ರದ ಸಂಭಾಷಣೆಗಳಿಗೆ ನಟರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ದೆಹಲಿಯ ಹೈಕೋರ್ಟ್ ಹೇಳಿದೆ.
ಸೇಕ್ರೆಡ್  ಗೇಮ್ಸ್ ವಿವಾದ:  ಸಂಭಾಷಣೆಗಳಿಗೆ ನಟರು ಹೊಣೆಯಲ್ಲ- ಹೈಕೋರ್ಟ್
ಸೇಕ್ರೆಡ್ ಗೇಮ್ಸ್ ವಿವಾದ: ಸಂಭಾಷಣೆಗಳಿಗೆ ನಟರು ಹೊಣೆಯಲ್ಲ- ಹೈಕೋರ್ಟ್
Updated on
ನವದೆಹಲಿ: ಚಿತ್ರದ ಸಂಭಾಷಣೆಗಳಿಗೆ ನಟರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ದೆಹಲಿಯ ಹೈಕೋರ್ಟ್ ಹೇಳಿದೆ.
ಅನುರಾಗ್ ಕಶ್ಯಪ್ ನಿರ್ದೇಶನದ ‘ಸೇಕ್ರೆಡ್ ಗೇಮ್ಸ್‌’ ವೆಬ್ ಸಿರೀಸ್ ನ ಸಂಭಾಷಣೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಬೆಂಬಲಿಗ ನಿಖಿಲ್ ಭಲ್ಲಾ ಎಂಬುವವರು ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. 
ವೆಬ್ ಸೀರಿಸ್ ನಲ್ಲಿ ಕೆಲವೊಂದು ಅಂಶಗಳನ್ನು ತೆಗೆದುಹಾಕಬೇಕೆಂದೂ ಕಾಂಗ್ರೆಸ್ ಬೆಂಬಲಿಗನ ಪರ ವಕೀಲರಾದ ಶಾಂಕ್ ಗರ್ಗ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ, ಸಂಭಾಷಣೆಗಳಿಗೆ ನಟರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದ್ದು ಮುಂದಿನ ವಿಚಾರಣೆಯನ್ನು ಜು.19 ಕ್ಕೆ ಮುಂದೂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com