ಓಂ ಪ್ರಕಾಶ್ ರಾವ್ ಸಿನಿಮಾಗೆ ಶಾನ್ವಿ ಶ್ರೀವಾತ್ಸವ್ ನಾಯಕಿ

: ನಿರ್ದೇಶಕ ಓಂ ಪ್ರಕಾಶ್ ರಾವ್ ತಮ್ಮ ಮುಂದಿನ ಸಿನಿಮಾಗೆ ಶಾನ್ವಿ ಶ್ರೀವಾತ್ಸವ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ, ಉಪೇಂದ್ರ ಮತ್ತು ..
ಶಾನ್ವಿ ಶ್ರೀವಾತ್ಸವ್
ಶಾನ್ವಿ ಶ್ರೀವಾತ್ಸವ್
ಬೆಂಗಳೂರು: ನಿರ್ದೇಶಕ ಓಂ ಪ್ರಕಾಶ್ ರಾವ್ ತಮ್ಮ ಮುಂದಿನ ಸಿನಿಮಾಗೆ  ಶಾನ್ವಿ ಶ್ರೀವಾತ್ಸವ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ, ಉಪೇಂದ್ರ ಮತ್ತು ರವಿಚಂದ್ರನ್ ಅವರು ನಟಿಸಿರುವ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸುತ್ತಿದ್ದು, ಶಾನ್ವಿ ನಾಯಕಿಯಾಗಿದ್ದಾರೆ.
ಆರ್ ಎಸ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ಮೂವರು ನಾಯಕಿಯರಿದ್ದು, ನಿಮಿಕಾ ರತ್ನಾಕರ್ ಫೈನಲ್ ಆಗಿದ್ದಾರೆ.  ಜೊತೆಗೆ ಶಾನ್ವಿ ಕೂಡ ನಾಯಕಿಯಾಗಿದ್ದಾರೆ ಎಂದು ನಿರ್ಮಾಪಕ ಆರ್ ಶ್ರೀನಿವಾಸ್ ತಿಳಿಸಿದ್ದಾರೆ.
ಪ್ರಮುಖ ಕಲಾವಿದರ ಪಟ್ಟಿ ಫೈನಲ್ ಆಗಿದ್ದು ಆಗಸ್ಟ್ 20ರಂದು ಶೂಟಿಂಗ್ ಆರಂಭಿಸಲಾಗುವುದು ಎಂದು ಹೇಳಿದ್ದಾರೆ, ಆಗಸ್ಟ್ 16 ರಂದು ಸಿನಿಮಾದ ಫೋಟೋ ಶೂಟ್ ನಡೆಯಲಿದೆ.  ಹೊಯ್ಸಳ ಎಂಬ ಶೀರ್ಷಿಕೆ ಇಡಲಾಗುವುದು ಎಂದು ಕೇಳಿ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com