ಶಿವರಾಜ್ ಕುಮಾರ್ ಅವರ ಮೊದಲ ವೆಬ್ ಸಿರೀಸ್ ವಿದೇಶದಲ್ಲಿ ಶೂಟಿಂಗ್

ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ತಮ್ಮ ಪುತ್ರಿ ನಿವೇದಿತಾ ಜೊತೆ ‘ಶ್ರೀಮುತ್ತು’ ಹೆಸರಿನ ನಿರ್ಮಾಣ ಸಂಸ್ಥೆ ...
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
ಬೆಂಗಳೂರು: ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ತಮ್ಮ ಪುತ್ರಿ ನಿವೇದಿತಾ ಜೊತೆ ‘ಶ್ರೀಮುತ್ತು’ ಹೆಸರಿನ ನಿರ್ಮಾಣ ಸಂಸ್ಥೆ ತೆರೆದಿರುವ ಶಿವರಾಜ್​ಕುಮಾರ್, ಮೊದಲ ಹಂತವಾಗಿ ‘ಮಾನಸ ಸರೋವರ’ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ.
ಇದೀಗ ಆ ಸಂಸ್ಥೆ ಮೂಲಕ ವೆಬ್ ಸರಣಿ ನಿರ್ಮಿಸಲು ಶಿವರಾಜ್​ಕುಮಾರ್ ಮುಂದಾಗಿದ್ದಾರೆ. ಈ ಹಿಂದೆ ಆರ್.ಜೆ. ಪ್ರದೀಪ್ ಅವರ ‘ಸಖತ್ ಸ್ಟುಡಿಯೋ’ ಬ್ಯಾನರ್​ನಲ್ಲಿ ‘ಲೂಸ್ ಕನೆಕ್ಷನ್’ ವೆಬ್ ಸಿರೀಸ್ ನಿರ್ಮಾಣವಾಗಿತ್ತು. ಯೂಟ್ಯೂಬ್​ನಲ್ಲೂ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು.
ಅದನ್ನು ನೋಡಿರುವ ಶಿವಣ್ಣ ತಮ್ಮದೇ ಹೋಮ್ ಬ್ಯಾನರ್ ನಲ್ಲಿ ವೆಬ್ ಸರಣಿ ಮಾಡಲು ಮುಂದಾಗಿದ್ದಾರೆ. ವಿದೇಶದಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಲೊಕೇಷನ್ ಸಹ ಆಯ್ಕೆ ಮಾಡಿಕೊಳ್ಳಲಾಗಿದ್ದು, ಧಾರಾವಾಹಿ, ಸಿನಿಮಾ ಹಾಗೂ ನಿರೂಪಣೆಯಲ್ಲಿ ತೊಡಗಿಸಿಕೊಂಡಿರುವ ಹಲುವು ಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com