ರ್ಯಾಂಬೊ 2 ನಂತರ 'ರ್ಯಾಂಬೋ ರಿಟರ್ನ್ಸ್' ಸಿಕ್ವೇಲ್ ಸುಳಿವು ಕೊಟ್ಟ ನಿರ್ಮಾಪಕರು!
ಇತ್ತೀಚೆಗಷ್ಟೇ ಬಿಡುಗಡೆಯಾದ ಶರಣ್ ಅಭಿನಯದ ರ್ಯಾಂಬೊ 2 ಚಿತ್ರದ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಈ ಮಧ್ಯೆ ರ್ಯಾಂಬೊ ಸ್ವಿಕೇಲ್ ಮಾಡುವುದಾಗಿ ನಿರ್ಮಾಪಕರು ಸುಳಿವು ಕೊಟ್ಟಿದ್ದಾರೆ...
ಇತ್ತೀಚೆಗಷ್ಟೇ ಬಿಡುಗಡೆಯಾದ ಶರಣ್ ಅಭಿನಯದ ರ್ಯಾಂಬೊ 2 ಚಿತ್ರದ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಈ ಮಧ್ಯೆ ರ್ಯಾಂಬೊ ಸ್ವಿಕೇಲ್ ಮಾಡುವುದಾಗಿ ನಿರ್ಮಾಪಕರು ಸುಳಿವು ಕೊಟ್ಟಿದ್ದಾರೆ.
ಶರಣ್, ಆಶಿಕಾ ರಂಗನಾಥ್, ಚಿಕ್ಕಣ್ಣ, ಸಾಧು ಕೋಕಿಲಾ ಮತ್ತು ರವಿಶಂಕರ್ ಅಭಿನಯದ ರ್ಯಾಂಬೋ 2 ಚಿತ್ರ ಉತ್ತಮ ಗಳಿಕೆ ಮಾಡುತ್ತಿದ್ದು ಕಳೆದ ವಾರವಷ್ಟೇ ಅಮೆರಿಕದಲ್ಲೂ ಬಿಡುಗಡೆಯಾಗಿತ್ತು.
ಚಿತ್ರದ ಯಶಸ್ಸು ಕುರಿತಂತೆ ಮಾತನಾಡಿದ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ತರುಣ್ ಸುಧೀರ್ ಅವರು 2012ರಲ್ಲಿ ರ್ಯಾಂಬೋ ಮತ್ತು ಇದೀಗ ರ್ಯಾಂಬೋ 2 ಚಿತ್ರ ಬಿಡುಗಡೆಯಾಗಿದ್ದು ಎರಡು ಚಿತ್ರಗಳು ಸದ್ದು ಮಾಡಿದ್ದವು ಈ ಹಿನ್ನೆಲೆಯಲ್ಲಿ ರ್ಯಾಂಬೋ ಮುಂದುವರಿದ ಭಾಗವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಬಾಲಿವುಡ್ ನಲ್ಲಿ ಹಲವು ಸ್ವಿಕೇಲ್ ಚಿತ್ರಗಳು ಬಂದು ಯಶಸ್ವಿಯಾಗಿವೆ. ಗೋಲ್ ಮಾಲ್, ವೆಲ್ ಕಮ್, ಡಾನ್ ಮತ್ತು ಕ್ರಿಶ್ ಚಿತ್ರಗಳ ಸಿಕ್ವೇಲ್ ಯಶಸ್ಸು ಕಂಡಿದ್ದು ಕನ್ನಡದಲ್ಲಿ ಸಿಕ್ವೇಲ್ ಗಳ ಸಂಖ್ಯೆ ಕಡಿಮೆ. ಇತ್ತೀಚೆಗೆ ದಂಡುಪಾಳ್ಯ ಸಿಕ್ವೇಲ್ ಗಳು ಬಿಡುಗಡೆಯಾಗಿತ್ತು.
ರ್ಯಾಂಬೋ ಸಿಕ್ವೇಲ್ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪಕರು ಸಿಕ್ವೇಲ್ ಚಿತ್ರಕ್ಕೆ ರ್ಯಾಂಬೋ ರಿಟರ್ನ್ಸ್ ಎಂದು ಶೀರ್ಷಿಕೆ ಇಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ.