'ಶನಿ' ಸೀರಿಯಲ್ ಖ್ಯಾತಿಯ ರಾಘವೇಂದ್ರ ಹೆಗಡೆ ನಿರ್ದೇಶನದಲ್ಲಿ ಧ್ರುವ ಸರ್ಜಾ ಸಿನಿಮಾ!

ದ್ಧೂರಿ, ಬಹದ್ದೂರ್, ಮತ್ತು ಭರ್ಜರಿ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ನಟ ಧ್ರುವ ಸರ್ಜಾ ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ...
ಧ್ರುವ ಸರ್ಜಾ
ಧ್ರುವ ಸರ್ಜಾ
Updated on
ಬೆಂಗಳೂರು; ಅದ್ಧೂರಿ, ಬಹದ್ದೂರ್, ಮತ್ತು ಭರ್ಜರಿ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ನಟ ಧ್ರುವ ಸರ್ಜಾ ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗೆ ಗಂಗಾಧರ್ ನಿರ್ಮಾಪಕರು. 
ಉದಯ್ ಮೆಹ್ತಾ ಅವರ ಮತ್ತೊಂದು ಸಿನಿಮಾಗೆ ಸಹಿ ಮಾಡಿರುವ ಧ್ರುವ ಈಗ ಇನ್ನೊಂದು ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ.
ಜಗ್ಗುದಾದಾ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗಡೆ ಮುಂದಿನ ಸಿನಿಮಾದಲ್ಲಿ ಧ್ರುವ ನಟಿಸಲಿದ್ದಾರೆ, ಇದು ಧ್ರುವ ಸರ್ಜಾ ಆರನೇ ಸಿನಿಮಾವಾಗಿದೆ.
ನಿರ್ದೇಶಕ ರಾಘವೇಂದ್ರ ಹೆಗಡೆ ಕಥೆ ಸಂಬಂಧ ಧ್ರುವ ಸರ್ಜೆ ಜೊತೆ  ಮಾತುಕತೆ ನಡೆಸುತ್ತಿದ್ದಾರೆಎಂದು ಮೂಲಗಳು ತಿಳಿಸಿವೆ. ಸಿನಿಮಾಗೆ ನಿರ್ದೇಶಕ ರಾಘವೇಂದ್ರ ಹೆಗಡೆ ಅವರೇ  ಬಂಡವಾಳ ಹೂಡುತ್ತಿದ್ದಾರೆ.  ಧ್ರುವ ಸರ್ಜಾಗೆ 2019ರ ಮೊದಲ ಪ್ರಾಜೆಕ್ಟ್ ಇದಾಗಲಿದೆ. ಮುಂದಿನ ವರ್ಷ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. 
ಕನ್ನಡದಲ್ಲಿ ದರ್ಶನ್ ಅಭಿನಯದ ಜಗ್ಗುದಾದಾ ಸಿನಿಮಾ ರಾಘವೇಂದ್ರ ಹೆಗಡೆ 
ಅವರ ಮೊದಲ ಚಿತ್ರವಾಗಿತ್ತು. ಇದು ಹೆಗಡೇ ಅವರ 2ನೇ ಚಿತ್ರವಾಗಿದ್ದು, ಧ್ರುವ ಸರ್ಜಾಗಾಗಿ ವಿಶೇಷವಾಗಿ ಚಿತ್ರಕತೆ ಬರೆಯುತ್ತಿದ್ದಾರೆ.  ನಿರ್ದೇಶಕ ರಾಘವೇಂದ್ರ ಹೆಗಡೆ ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ,ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶನಿ ಮತ್ತು ಮಹಾಕಾಳಿ ಧಾರಾವಾಹಿ ಹೊಣೆ ಹೊತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com