'ಐ ಲವ್ ಯೂ' ಚಿತ್ರದಲ್ಲಿ ಉಪೇಂದ್ರ ಪತ್ನಿಯಾಗಿ ಸೋನು ಗೌಡ

ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾವನ್ನು ಆರ್ ಚಂದ್ರು ನಿರ್ದೇಶಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ....
ಸೋನುಗೌಡ ಮತ್ತು ಉಪೇಂದ್ರ
ಸೋನುಗೌಡ ಮತ್ತು ಉಪೇಂದ್ರ
ಬೆಂಗಳೂರು: ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾವನ್ನು ಆರ್ ಚಂದ್ರು ನಿರ್ದೇಶಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ.
ಕಾಮ ಮತ್ತು ಪ್ರೇಮದ ಕತೆಯುಳ್ಳ ಈ ಸಿನಿಮಾ ಕೌಟುಂಬಿಕ ಮನರಂಜನಾ ಚಿತ್ರವಾಗಿದೆ, ರಚಿತಾರಾಮ್ ಮತ್ತು ಸೋನುಗೌಡ ನಟಿಸಿದ್ದಾರೆ.
ಕುಂಗ್ ಫೂ ಫೈಟ್ ಮತ್ತು ಚಾಪರ್ ಲ್ಯಾಂಡಿಂಗ್  ಸನ್ನಿವೇಶಗಳ ಶೂಟಿಂಗ್ ಮುಗಿದಿದೆ, ಸೊಮವಾರ ನಟಿ ಸೋನು ಗೌಡ ಶೂಟಿಂಗ್ ಸೆಟ್ ಸೇರಿದ್ದಾರೆ. ಚಿತ್ರದಲ್ಲಿ ಉಪೇಂದ್ರ ಪತ್ನಿಯಾಗಿ ಸೋನುಗೌಡ ನಟಿಸಿದ್ದಾರೆ.
ಮೊದಲ ಬಾರಿಗೆ ಉಪೇಂದ್ರ ಜೊತೆ ಅಭಿನಯಿಸುತ್ತಿರುವುದಕ್ಕೆ ತೀವ್ರ ಎಕ್ಸೈಟ್ ಆಗಿದ್ದಾರೆ, ಚಂದ್ರು ಅವರು ಕರೆ ಮಾಡಿ ನನಗೆ ವಿಷಯ ಹೇಳಿದಾಗ ನಾನು ಕಾಸ್ಟ್ಯೂಮ್ ಡಿಸೈನರ್ ಗಾಗಿ ಹುಡುಕಾಟ ನಡೆಸಿದ್ದೆ, ಆದರೆ ಸಿನಿಮಾದಲ್ಲಿ ನನ್ನದು ಟಿಪಿಕಲ್ ಹೆಂಡತಿ ಪಾತ್ರ, ಸಾಂಪ್ರಾದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳಬೇಕು ಎಂದು ಹೇಳಿದರು,
ಉಪೇಂದ್ರ ಜೊತೆ ಕೆಲಸ ಮಾಡುವುದಕ್ಕೆ ಉತ್ಸುಕತೆಯಿಂದಿದ್ದೆ ಆದರೆ ನನಗೆ ಭಯವಾಗುತ್ತಿತ್ತು. ಉಪೇಂದ್ರ ಒಬ್ಬ ಉತ್ತಮ ನಟ ಹಾಗೂ ಪ್ರತಿಭಾನ್ವಿತ ನಿರ್ದೇಶಕ,  ಅವರ ಯೋಚನೆ ನನಗಿಂತ ವಿಭಿನ್ನ, ನನ್ನ ನಟನೆ ಬಗ್ಗೆ ಅವರು ಏನು ಯೋಚಿಸುತ್ತಾರೋ ಎಂಬ ಬಗ್ಗೆ ಕಾಯುುತ್ತಿದ್ದೇನೆ ಎಂದು ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com