ನಾನು ಆರ್ಡಿನರಿ ನ್ಯೂ ಕಮರ್ ಅಲ್ಲ, ನನ್ನ ಪೋಷಕರು ಸ್ಟಾರ್ ಗಳು, ನಾನು ಶ್ರೀಮಂತ ಪರಂಪರೆಯಿಂದ ಬಂದಿದ್ದೇನೆ. ಚಿತ್ರರಂಗಕ್ಕೆ ಬರುವ ಬೇರೆ ಹೊಸಬರಿಗಿಂತ ನಾನು ವಿಭಿನ್ನಅವರು ಎದುರಿಸಬೇಕಾದ ಸಮಸ್ಯೆಗಳು ನನಗಿಲ್ಲ, ಏಕೆಂದರೇ ನಾನು ಕಲಾವಿದರ ಕುಟುಂಬದಿಂದ ಬಂದಿದ್ದೇನೆಸ ನನಗೆ ಜವಾಬ್ದಾರಿಯಿದೆ, ನಾನು ಅಹಂಕಾರದ ವ್ಯಕ್ತಿಯಲ್ಲ, ನನ್ನ ಕಾರ್ಯಕ್ಷಮತೆ ಮೇಲೆ ಈ ಚಿತ್ರದ ಯಶಸ್ಸು ನಿಂತಿದೆ. ಇಲ್ಲಿನ ನನ್ನ ಹೋರಾಟ ಸಂಪೂರ್ಣ ವಿಭಿನ್ನ, ಬೇರೆ ಹೊಸಬರು ಅವಕಾಶಕ್ಕಾಗಿ ಕಾಯುತ್ತಾರೆ, ಜೊತೆಗೆ ಗುರುತಿಸಿಕೊಳ್ಳಲು ಕಷ್ಟ ಎಂದು ಹೇಳಿದ್ದಾರೆ.