ಜೀವಮಾನದ ಸಾಧನೆಗಾಗಿ ನಟ ಶತೃಘ್ನ ಸಿನ್ಹಾ ಗೆ ಬ್ರಿಟನ್ ಪ್ರಶಸ್ತಿ

ಕಲೆ ಮತ್ತು ರಾಜಕೀಯ ಕ್ಷೇತ್ರಗಳಲ್ಲಿನ ಸಾಧನೆಗಾಗಿ ನಟ ಹಾಗೂ ರಾಜಕಾರಣಿ ಶತೃಘ್ನ ಸಿನ್ಹಾ ಅವರಿಗೆ ಬ್ರಿಟನ್ ಪ್ರಶಸ್ತಿ ದೊರೆತಿದೆ...
ಶತೃಘ್ನ ಸಿನ್ಹಾ
ಶತೃಘ್ನ ಸಿನ್ಹಾ
ಲಂಡನ್: ಕಲೆ ಮತ್ತು ರಾಜಕೀಯ ಕ್ಷೇತ್ರಗಳಲ್ಲಿನ ಸಾಧನೆಗಾಗಿ ನಟ ಹಾಗೂ ರಾಜಕಾರಣಿ ಶತೃಘ್ನ ಸಿನ್ಹಾ ಅವರಿಗೆ ಬ್ರಿಟನ್ ಪ್ರಶಸ್ತಿ ದೊರೆತಿದೆ.
ಬ್ರಿಟನ್ ನ ಏಷ್ಯನ್ ವಾಯ್ಸ್ ವೀಕ್ಲಿ ನ್ಯೂಸ್ ಪೇಪರ್  ಕಳೆದ 12 ವರ್ಷಗಳಿಂದ ಪೊಲಿಟಿಕಲ್ ಮತ್ತು ಪಬ್ಲಿಕ್ ಲೈಫ್ ಅವಾರ್ಡ್ ನೀಡುತ್ತಿದೆ, ಈ ವರ್ಷದ ಪ್ರಶಸ್ತಿಗೆ ಶತೃಘ್ನ ಸಿನ್ಹ ಆವರನ್ನು ಆಯ್ಕೆ ಮಾಡಿದೆ. ಬ್ರಿಟನ್ ನ ಪಾರ್ಲಿಮೆಂಟ್ ಕಾಂಪ್ಲೆಕ್ಸ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಹೌಸ್ ಆಫ್ ಕಾಮನ್ಸ್ ಕಟ್ಟಡದ ಡೈನಿಂಗ್ ರೂಮ್ ನಲ್ಲಿ ನಡೆದ ಸಮಾರಂಭದಲ್ಲಿ  ಸಂಸದರು ಪಾಲ್ಗೋಂಡಿದ್ದರು. ಆತ್ಮ ವಿಶ್ವಾಸ ಬದ್ಧತೆ ತರುತ್ತದ, ಬದ್ಧತೆಯಿಂದ ನಿರ್ಧಾರ ಬರುತ್ತದೆ, ನಿರ್ಧಾರದಿಂದ ಭಕ್ತಿ ಬರುತ್ತದೆ, ನೀವು ಯಾವಾಗ ಬದ್ಧತೆ, ನಿರ್ಧಾರ, ಹಾಗೂ ಭಕ್ತಿಯಲ್ಲಿರುತ್ತಿರೋ ನಿಮಗೆ ಅಭಿರುಚಿ ಬರುತ್ತದೆ ಎಂದು 72 ವರ್ಷದ ಶತೃಘ್ನ ಸಿನ್ಹಾ ಹೇಳಿದ್ದಾರೆ.
ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ನೀವು ಉತ್ತಮರಲ್ಲಿ ಉತ್ತಮರು ಎಂಬುದನ್ನು ಸಾಬೀತು ಪಡಿಸಬೇಕು, ಉಳಿದವಕ್ಕಿಂತ ಭಿನ್ನವಾಗಿರುವುದಕ್ಕೆ ಪ್ರಯತ್ನಿಸಿ, ಎಂದು ಹೇಳಿದರು, ಪ್ರಶಸ್ತಿ ಪಡೆಯುವ ನೆಪದಲ್ಲಿ ಐತಿಹಾಸಿಕ ಅರಮನೆಗೆ ಭೇಟಿ ನೀಡುವ ಅವಕಾಶ ಸಿಕ್ಕಿತು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com