ಕೋಟಿಗೊಬ್ಬ3 ಸಿನಿಮಾಗೆ ಚಾಲನೆ: ಚಿತ್ರಕ್ಕೆ ಸುದೀಪ್ ಕಥೆ

ಸುದೀಪ್ ಅಭಿನಯದ ಕೋಟಿಗೊಬ್ಬ3 ಗೆ ಚಾಲನೆ ಸಿಕ್ಕಿದೆ, ಶುಕ್ರವಾರ ಸರಳ ಪೂಜೆಯೊಂದಿಗೆ ನಿರ್ಮಾಪಕ ಮುನಿರತ್ನ ಚಾಲನೆ ನೀಡಿದ್ದಾರೆ. ಈ ವೇಳೆ ಸುದೀಪ್ ಪತ್ನಿ ...
ಸರಳ ಪೂಜೆಯೊಂದಿಗೆ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾಗೆ ಚಾಲನೆ
ಸರಳ ಪೂಜೆಯೊಂದಿಗೆ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾಗೆ ಚಾಲನೆ
ಬೆಂಗಳೂರು: ಸುದೀಪ್ ಅಭಿನಯದ ಕೋಟಿಗೊಬ್ಬ3 ಗೆ ಚಾಲನೆ ಸಿಕ್ಕಿದೆ, ಶುಕ್ರವಾರ ಸರಳ ಪೂಜೆಯೊಂದಿಗೆ ನಿರ್ಮಾಪಕ ಮುನಿರತ್ನ ಚಾಲನೆ ನೀಡಿದ್ದಾರೆ. ಈ ವೇಳೆ ಸುದೀಪ್ ಪತ್ನಿ ಪ್ರಿಯಾ ರಾಮಕೃಷ್ಣ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಜರಿದ್ದರು.
ಸೂರಪ್ಪಬಾಬು ನಿರ್ಮಾಣದ ಸಿನಿಮಾಗೆ ಶಿವಕಾರ್ತಿಕ್ ನಿರ್ದೇಶನವಿದೆ.ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಿನಿಮಾದ ಕಥೆಯನ್ನು ಕಿಚ್ಚ ಸುದೀಪ್ ಬರೆದಿದ್ದಾರೆ. 2010 ರಲ್ಲಿ ತೆರೆ ಕಂಡ ಜಸ್ಟ್ ಮಾತ್ ಮಾತಲ್ಲಿ ಸಿನಿಮಾಗೂ ಸುದೀಪ್ ಚಿತ್ರಕಥೆ ಬರೆದಿದ್ದರು. 
ಸಾಕಷ್ಟು ವಿಚಾರಗಳಿಂದ ಈಗಾಗಲೇ ಭಾರಿ ಸುದ್ದಿ ಮಾಡಿರುವ ಕೋಟಿಗೊಬ್ಬ3 ಸಿನಿಮಾ ಆರಂಭದಲ್ಲೇ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿನ್ನೆಯಿಂದಲೇ ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com