ಹರಿ ಸಂತೋಷ್ ನಿರ್ದೇಶನದ ಮುಂದಿನ ಸಿನಿಮಾಗೆ ಶರಣ್ ಹೀರೋ

: ಅನಿಲ್ ಕುಮಾರ್ ನಿರ್ದೇಶನದ ರ್ಯಾಂಬೋ-2 ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ.ಸದ್ಯಕ್ಕೆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಸ್ಟೇಜ್ ನಲ್ಲಿದೆ, ಹೀಗಾಗಿ ಶರಣ್ ...
ತರುಣ್ ಶಿವಪ್ಪ, ಶರಣ್, ತರುಣ್ ಸುಧೀರ್, ಮತ್ತು ಹರಿ ಸಂತೋಷ್
ತರುಣ್ ಶಿವಪ್ಪ, ಶರಣ್, ತರುಣ್ ಸುಧೀರ್, ಮತ್ತು ಹರಿ ಸಂತೋಷ್
Updated on
ಬೆಂಗಳೂರು: ಅನಿಲ್ ಕುಮಾರ್ ನಿರ್ದೇಶನದ ರ್ಯಾಂಬೋ-2 ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ.ಸದ್ಯಕ್ಕೆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಸ್ಟೇಜ್ ನಲ್ಲಿದೆ, ಹೀಗಾಗಿ ಶರಣ್ ಮುಂದಿನ ಪ್ರಾಜೆಕ್ಟ್ ಗಾಗಿ ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಯೋಗಣ್ಣ ಮುದ್ದಣ್ಣ ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.
ಈ ಸಿನಿಮಾಗಾಗಿ ಸೋಮವಾರ ಸರಳ ಮೂಹೂರ್ತ ಸಮಾರಂಭ ಕೂಡ ನಡೆಯಿತು.ಹರಿ ಸಂತೋಷ್ ನಿರ್ದೇಶನದ ಸಿನಿಮಾಗೆ ಕಾಲೇಜ್ ಕುಮಾರ್ ಖ್ಯಾತಿಯ ತರುಣ್ ಸುದೀರ್ ಕಥೆ ಬರೆದಿದ್ದಾರೆ, ಈ ಸಿನಿಮಾಗೆ ತರುಣ್ ಶಿವಪ್ಪ ನಿರ್ಮಾಣ ಮಾಡುತ್ತಿದ್ದಾರೆ.
ಮುಂದಿನ 10 ದಿನಗಳು ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ, ರವಿಶಂಕರ್ ಕೂಡ ಸಿನಿಮಾದಲ್ಲಿ ನಟಿಸಿದ್ದು, ಮುಂದಿನ ಕೆಲ ದಿನಗಳಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಶರಣ್ ಗೆ ನಾಯಕಿಗಾಗಿ  ಹುಡುಕಾಟ ಆರಂಭವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com