ಮೈಸೂರು: ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಅಂಗವಾಗಿ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ರಂಗೇರುತ್ತಿದ್ದು, ರಾಜಕೀಯ ಅಖಾಡಕ್ಕೆ ಸ್ಟಾರ್ ಕ್ಯಾಂಪೇನರರ್ಸ್‌ಗಳ ಎಂಟ್ರಿಯಾಗಿದೆ.
ನನಗೆ ರಾಜಕಾರಣಿಯಾಗಲು ಇಷ್ಟವಿಲ್ಲ ಎಂದಿದ್ದ ರಾಕಿಂಗ್ ಸ್ಟಾರ್ ಯಶ್ ಅವರು ಮೈಸೂರಿನಲ್ಲಿ ಪಕ್ಷಾತೀತವಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಮೈಸೂರಿನ ಕೆ.ಆರ್.ನಗರ ಕ್ಷೇತ್ರದಲ್ಲಿ ಜೆಡಿಸ್ ಅಭ್ಯರ್ಥಿ ಸಾ.ರಾ.ಮಹೇಶ್ ಅವರ ಪರ ಬೆಳಗ್ಗೆ ರೋಡ್ ಶೋ ನಡೆಸಲಿದ್ದಾರೆ.
ಸಂಜೆ ಕೃಷ್ಣ ರಾಜ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಎಸ್.ಎ.ರಾಮ್‌ದಾಸ್ ಪರ ರೋಡ್ ಶೋ ನಡೆಸಲಿದ್ದಾರೆ.
ಇಬ್ಬರು ನನ್ನ ಆಪ್ತರಾಗಿರುವ ಕಾರಣ ಪ್ರಚಾರಕ್ಕೆ ಮುಂದಾಗಿದ್ದು ಯಾವುದೇ ಪಕ್ಷದ ಪರ ಅಲ್ಲ, ಸ್ನೇಹಪೂರ್ವಕವಾಗಿ ರಾಮದಾಸ್ ಪರ ಪ್ರಚಾರ ಮಾಡುತ್ತಿದ್ದೇನೆ. ಇದೇ ರೀತಿ, ಇತರೆ ಪಕ್ಷದ ಆತ್ಮೀಯರ ಪರ ಕೂಡಾ ಪ್ರಚಾರ ಕೈಗೊಳ್ಳಬಹುದು. ನಾನು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.