ಐಶಾನಿ ಶೆಟ್ಟಿ ಕಥೆ ರಚಿಸಿ, ನಿರ್ದೇಶಿಸಿರುವ ಕಾಜಿ ಕಿರುಚಿತ್ರಕ್ಕೆ ಪ್ರಶಸ್ತಿ, ಪುರಸ್ಕಾರಗಳ ಸುರಿಮಳೆ

ನಿರ್ದೇಶಕಿ ಕಮ್ ನಟಿ ಐಶಾನಿ ನಟಿ ಅವರ ಕಿರುಚಿತ್ರ ಕಾಜಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನಗೊಂಡಿರುವುದು ಅವರಿಗೆ ಹೆಮ್ಮೆಯನ್ನುಂಟುಮಾಡಿದೆ.
ಐಶಾನಿ ಶೆಟ್ಟಿ
ಐಶಾನಿ ಶೆಟ್ಟಿ
Updated on: 

ನಿರ್ದೇಶಕಿ ಕಮ್  ನಟಿ ಐಶಾನಿ ಶೆಟ್ಟಿ  ಅವರೇ ಕಥೆ ರಚಿಸಿ, ನಿರ್ದೇಶಿಸಿರುವ  ಕಿರುಚಿತ್ರ ಕಾಜಿ  ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ  ವೇದಿಕೆಗಳಲ್ಲಿ  ಪ್ರದರ್ಶನಗೊಂಡಿರುವುದು  ಅವರಿಗೆ ಹೆಮ್ಮೆಯನ್ನುಂಟುಮಾಡಿದೆ.

17 ನಿಮಿಷದ ಈ ಕಿರುಚಿತ್ರ  ಕ್ಯಾಲಿಪೋರ್ನಿಯಾದ ಕಿರುಚಿತ್ಸೋತ್ಸವ ಹಾಗೂ 8 ನೇ ದಾದಾ ಸಾಹೇಬ್ ಪಾಲ್ಕೆ ಅಕಾಡೆಮಿ ಚಲನಚಿತ್ರೋತ್ಸವದಲ್ಲಿ  ಪ್ರದರ್ಶನಗೊಂಡಿದೆ.

ಈ ಚಿತ್ರದಲ್ಲಿನ ಛಾಯಾಗ್ರಹಣಕ್ಕಾಗಿ  ಪ್ರಿತಮ್   ತೆಗ್ಗಿಮಾನೇ  ಅವರಿಗೆ ಉತ್ತಮ ಛಾಯಾಗ್ರಾಹಕ ಪ್ರಶಸ್ತಿ ಸಂದಿದೆ. ಚುನಾವಣೆ ನಂತರ ಈ ಚಿತ್ರವನ್ನು ಥಿಯೇಟರ್ ನಲ್ಲಿ ಪ್ರದರ್ಶಿಸಿಲು ಐಶಾನಿ ಶೆಟ್ಟಿ ಕಾತುರದಿಂದ ಕಾಯುತ್ತಿದ್ದಾರೆ.

ದಾದಾ ಸಾಹೇಬ್ ಅಕಾಡೆಮಿ  ಅಂತಹ   ಚಿತ್ರೋತ್ಸವದಲ್ಲಿ ತಮ್ಮ ಸಿನಿಮಾ  ಪ್ರದರ್ಶನಗೊಂಡದ್ದು  ತುಂಬಾ  ಸಂತಸವನ್ನುಂಟುಮಾಡಿದೆ. ಪ್ರಶಸ್ತಿ ಪಡೆದಿರುವುದು  ಕೇಕ್ ಮೇಲಿನ ಐಸ್ ನಂತಷ್ಟೇ  ಎಂದು ಐಶಾನಿ ಶೆಟ್ಟಿ ಹೇಳುತ್ತಾರೆ.

ಕೆಲ ವರ್ಷಗಳ ಹಿಂದೆ ಪದವಿ ಶಿಕ್ಷಣಕ್ಕಾಗಿ ಸಿನಿಮಾದಿಂದ ಕೆಲಕಾಲ ವಿಶ್ರಾಂತಿ ತೆಗೆದುಕೊಂಡಿದ್ದೆ.  ಪತ್ರಿಕೋದ್ಯಮ ತೆಗೆದುಕೊಂಡ ನಂತರ  ಸಿನಿಮಾ ನಿರ್ಮಾಣ  ಕ್ಷೇತ್ರದ ಕಡೆಗೆ ಉತ್ಸಾಹ ಹೆಚ್ಚಾಯಿತು ಎಂದು  ತಮ್ಮ ಜರ್ನಿ ಬಿಚ್ಚಿಟ್ಟ  ಐಶನಿ,  ಕಥೆ ಮನಸ್ಸಿನಲ್ಲಿಯೇ  ಇದ್ದರೆ, ಪೇನ್, ಪೇಪರ್ ಅಗತ್ಯವಿಲ್ಲ , ತನ್ನ ಆಲೋಚನೆಗಳನ್ನು ಒಟ್ಟಾಗಿದದ್ದು,  ಸಿನಿಮಾ ನಿರ್ಮಾಣ ಕೆಲಸಕ್ಕೆ  ನೆರವಾಯಿತು ಎನ್ನುತ್ತಾರೆ,

 ನೀನಾಸಂ ಸತೀಶ್  ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ತಾಯಿ ಮತ್ತು ಮಗನ ವಿಷಯವಿರುವ  ಚಿತ್ರ ಮಾಡುವ ಬಗ್ಗೆ ಅವರೊಂದಿಗೆ ಮಾತನಾಡಿದ್ದೇ, ಅವರು  ಕಥೆ ಇಷ್ಟಪಟ್ಟು ಕೆಲ ಸಲಹೆಗಳನ್ನು ನೀಡಿದ್ದರು.  ಎಲ್ಲಾ ಕೆಲಸ ಚೆನ್ನಾಗಿ ಆದದ್ದು,  ತಮ್ಮಗೆ ಅನುಕೂಲವಾಯಿತು. ಉತ್ತಮ ಪ್ರಸಾದನ ಹಾಗೂ ತಾಂತ್ರಿಕ ಸಿಬ್ಬಂದಿ ಹೊಂದಿರುವುದಾಗಿ ಅವರು ಹೇಳುತ್ತಾರೆ.

ಈ ಚಿತ್ರದಲ್ಲಿ ಮಧುರಾ ಚನ್ನಿಂಗ ಮತ್ತು ಇಂಚರಾ ಬಾಲ ಕಲಾವಿದರೊಂದಿಗೆ ಹಿತಾ ಚಂದ್ರಶೇಖರ್ ಪ್ರಮುಖ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ. ಪ್ರಿತಮ್   ಛಾಯಾಗ್ರಾಹಣವಿದ್ದು, ಮಿದುನ್ ಮುಕುಂದನ್ ಅವರು ಸಂಗೀತ ಸಂಯೋಜಿಸಿದ್ದಾರೆ ಎಂದು ಐಶಾನಿ ಶೆಟ್ಟಿ ತಿಳಿಸಿದರು.

ಪ್ರಶಸ್ತಿಗಾಗಿ ಸಿನಿಮಾ ಮಾಡಿಲ್ಲ. ಕಾಜಿ ಸಿನಿಮಾಕ್ಕೆ ದೊರೆತಿರುವ ಮಾನ್ಯತೆ ತಮ್ಮಗೊಂದು ಉನ್ನತ ಸ್ಥಾನ ದೊರಕಿಸಿಕೊಟ್ಟಿದೆ.  ಸಾಮಾಜಿಕ ಸಮಸ್ಯೆ ಹಾಗೂ ತಾರತಾಮ್ಯ ಕಥಾ ಹಂದರವನ್ನು ಹೊಂದಿದ್ದು,  ಉತ್ತಮ ಕಥೆ ಹೊಂದಿರುವುದಾಗಿ ಅವರು ಹೇಳಿದ್ದಾರೆ.



ಸ್ನಾತಕೋತ್ತರ ಪದವಿ   ವ್ಯಾಸಂಗ ಮಾಡುತ್ತಿರುವಾಗಲೇ   ನಡುವೆ ಅಂತರವಿರಲಿ ಸಿನಿಮಾ  ಚಿತ್ರೀಕರಣ ಪೂರ್ಣಗೊಳಿಸಿದ್ದು, ಆ ಸಿನಿಮಾ ಕೂಡಾ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿದೆ. ಪಿಆರ್ ಕೆ ಫಿಲಂ ಸಂಸ್ಥೆ ಆಡಿಯೋ ಹಕ್ಕುಗಳನ್ನು ತೆಗೆದುಕೊಂಡಿದೆ. ಜೂನ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಅವರು  ತಿಳಿಸಿದ್ದಾರೆ.

ನಿರ್ದೇಶನಕ್ಕೆ   ಹೆಚ್ಚಿನ ಬದ್ದತೆ ಬೇಕಾಗುತ್ತದೆ. ಅದನ್ನು ಕಿರುಚಿತ್ರದ ಚಿತ್ರೀಕರಣದ ಸಮಯದಲ್ಲಿ ಕಲಿತಿದ್ದೇನೆ. ಕೆಲ ಕಿರು ಚಿತ್ರಕ್ಕಾಗಿ ಕಥೆ ಬರೆಯುತ್ತಿದ್ದೇನೆ. ಒಬ್ಬ ಕಥೆಗಾರರಾಗಿ ಎಲ್ಲಾ ಮಾಹಿತಿಯನ್ನು ನೋಡುತ್ತೇನೆ. ಅದಕ್ಕೆ ತುಂಬಾ ಸಮಯ ಮೀಸಲಿಡಬೇಕಾಗುತ್ತದೆ ಎಂದು ಐಶಾನಿ ಶೆಟ್ಟಿ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com