ಪೈಲ್ವಾನ್ ಗೆ ಸುನಿಲ್ ಶೆಟ್ಟಿ ಮತ್ತು ಸುಶಾಂತ್ ಸಿಂಗ್ ಆಗಮನ

ಸುದೀಪ್ ಅವರ ಮುಂದಿನ ಎಸ್.ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರ ಸುದ್ದಿ ಮಾಡುತ್ತಲೇ ಇದೆ. ಚೆನ್ನೈಯಲ್ಲಿ...
ಸುನಿಲ್ ಶೆಟ್ಟಿ
ಸುನಿಲ್ ಶೆಟ್ಟಿ

ಸುದೀಪ್ ಅವರ ಮುಂದಿನ ಎಸ್.ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರ ಸುದ್ದಿ ಮಾಡುತ್ತಲೇ ಇದೆ. ಚೆನ್ನೈಯಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಚಿತ್ರಕ್ಕೆ ಆರ್ಆರ್ ಆರ್ ಮೋಶನ್ ಪಿಕ್ಚರ್ಸ್ ಬಂಡವಾಳ ಹಾಕಿದೆ. ಆಕಾಂಕ್ಷ ಸಿಂಗ್ ನಾಯಕಿಯಾಗಿ ನಟಿಸುತ್ತಿದ್ದು ಕಬೀರ್ ದುಹಾನ್ ಸಿಂಗ್ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದರೆ, ಬಾಲಿವುಡ್ ನಟ ಸುನಿಲ್ ಶೆಟ್ಟಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ದಕ್ಷಿಣ ಭಾರತ ಚಿತ್ರರಂಗಕ್ಕೆ ಸುನಿಲ್ ಶೆಟ್ಟಿ ಪೈಲ್ವಾನ್ ಮೂಲಕ ಕಾಲಿಡುತ್ತಿದ್ದಾರೆ. ರೆಸ್ಲಿಂಗ್ ಮತ್ತು ಬಾಕ್ಸಿಂಗ್ ಗೆ ಸಂಬಂಧಿಸಿದ ಚಿತ್ರದಲ್ಲಿ ಮತ್ತೊಬ್ಬ ಬಾಲಿವುಡ್ ನಟ ಸುಶಾಂತ್ ಸಿಂಗ್ ಕೂಡ ನಟಿಸುತ್ತಿದ್ದಾರಂತೆ.

ಅಂಬೇಡ್ಕರ್ ಮತ್ತು ದ ಲೆಜೆಂಡ್ ಆಫ್ ಭಗತ್ ಸಿಂಗ್ ನಲ್ಲಿ ಗಮನಾರ್ಹ ನಟನೆ ಮೂಲಕ ಗಮನ ಸೆಳೆದಿರುವ ಸುಶಾಂತ್ ಸಾವ್ ಧಾನ್ ಇಂಡಿಯಾ ಎಂಬ ಕ್ರೈಮ್ ಶೋ ಅವರಿಗೆ ಸಾಕಷ್ಟು ಜನಪ್ರಿಯತೆ ನೀಡಿತು. ತೆಲುಗು ಚಿತ್ರರಂಗಕ್ಕೆ ಈಗಾಗಲೇ ಎಂಟ್ರಿ ಕೊಟ್ಟಿರುವ ಅವರಿಗೆ ಇದು ಮೊದಲ ಕನ್ನಡ ಚಿತ್ರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com