ಅಮ್ಮ ಐ ಲವ್ ಯೂ ಚಿತ್ರದ ಹಾಡಿಗೆ ಸಾಧು ಕೋಕಿಲಾರ ಕಂಠಸಿರಿ!

ಆ ದಿನಗಳು ಚಿತ್ರದ ನಿರ್ದೇಶಕ ಕೆಎಂ ಚೈತನ್ಯ ನಿರ್ದೇಶನದ ಅಮ್ಮ ಐ ಲವ್ ಯೂ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ...
ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ
ಆ ದಿನಗಳು ಚಿತ್ರದ ನಿರ್ದೇಶಕ ಕೆಎಂ ಚೈತನ್ಯ ನಿರ್ದೇಶನದ ಅಮ್ಮ ಐ ಲವ್ ಯೂ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. 
ಇಂದು ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು ಚಿತ್ರದ ಸಂಗೀತ ಕುರಿತಂತೆ ನಿರ್ದೇಶಕ ಕೆಎಂ ಚೈತನ್ಯ ಸಂಗೀತ ನಿರ್ದೇಶಕ ಗುರುಕಿರಣ್ ಅವರನ್ನು ಹಾಡಿ ಹೊಗಳಿದ್ದಾರೆ.
ಅಮ್ಮ ಐ ಲವ್ ಯೂ ಚಿತ್ರ ಸಂಗೀತಮಯ ಚಿತ್ರವಾಗಿದ್ದು ಚಿತ್ರಕ್ಕಾಗಿ ಗುರುಕಿರಣ್ ಸಾಕಷ್ಟು ಶ್ರಮವಹಿಸಿ ಅತ್ಯುತ್ತಮ ಹಾಡುಗಳನ್ನು ನೀಡಿದ್ದಾರೆ ಎಂದರು. ಇದೇ ವೇಳೆ ಈ ಹಾಡುಗಳನ್ನು ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಮತ್ತು ಸುನೀಲ್ ಕಷ್ಯಪ್ ಹಾಡಿದ್ದು ಆ ಹಾಡುಗಳು ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದರು. 
ಈ ಚಿತ್ರದಲ್ಲಿನ ಹಾಡೊಂದನ್ನು ಸಾಧು ಕೋಕಿಲಾ ಮತ್ತು ಸುನೀಲ್ ಕಷ್ಯಪ್ ಇಬ್ಬರು ಹಾಡಿರುವುದು ವಿಶೇಷ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲಾ ವರ್ಗದವರಿಗೂ ಇಷ್ಟವಾಗುತ್ತದೆ. ಅಮ್ಮ ನನ್ನ ಈ ಜನ್ಮ ವರದಾನವಮ್ಮ ಎಂಬ ಹಾಡು ಭಾವನಾತ್ಮಕವಾಗಿ ಮೂಡಿಬಂದಿದ್ದು ಈ ಹಾಡಿಗೆ ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ ಎಂದರು. 
ಅಮ್ಮ ಐ ಲವ್ ಯೂ ಚಿತ್ರವನ್ನು ನಿರ್ಮಾಪಕ ಯೋಗಿ ದ್ವಾರಕೀಶ್ ಅವರು ದ್ವಾರಕೀಶ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾ, ನಿಶ್ವಿಕಾ ನಾಯ್ಡು ಮತ್ತು ತಾಯಿಯ ಪಾತ್ರದಲ್ಲಿ ಸಿತಾರ ಕಾರಣಿಸಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com