ಡಿ.7ಕ್ಕೆ ತೆರೆಗೆ ಗಣೇಶ್ ಅಭಿನಯದ 'ಆರೆಂಜ್', ಶಿವಣ್ಣನ 'ಕವಚ'ಕ್ಕೆ ಸ್ಪರ್ಧೆ?

ಗಣೇಶ್ ಅಭಿನಯದ "ಆರೆಂಜ್" ಚಿತ್ರ ಇದೇ ಡಿಸೆಂಬರ್ 7ಕ್ಕೆ ತೆರೆ ಕಾಣುತ್ತಿದ್ದು ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ಬಾಕ್ಸ್ ಆಫೀಸ್ ಸಂಘರ್ಷ ನಡೆಯುವ ಸೂಚನೆ ನೀಡಿದೆ.
ಆರೆಂಜ್ ಚಿತ್ರದಲ್ಲಿ ಪ್ರಿಯಾ ಆನಂದ್ ಮತ್ತು ಗಣೇಶ್
ಆರೆಂಜ್ ಚಿತ್ರದಲ್ಲಿ ಪ್ರಿಯಾ ಆನಂದ್ ಮತ್ತು ಗಣೇಶ್
Updated on
ಬೆಂಗಳೂರು: ಗಣೇಶ್ ಅಭಿನಯದ "ಆರೆಂಜ್" ಚಿತ್ರ ಇದೇ ಡಿಸೆಂಬರ್ 7ಕ್ಕೆ ತೆರೆ ಕಾಣುತ್ತಿದ್ದು ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ಬಾಕ್ಸ್ ಆಫೀಸ್ ಸಂಘರ್ಷ ನಡೆಯುವ ಸೂಚನೆ ನೀಡಿದೆ. ಏಕೆಂದರೆ ಅದೇ ಸಮಯದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ "ಕವಚ" ಸಹ ಬಿಡುಗಡೆಯಾಗಲಿದೆ.
ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿರುವ ಪ್ರಶಾಂತ್ ರಾಜ್ ನಿರ್ದೇಶನದ "ಆರೆಂಜ್" ಡಿಸೆಂಬರ್ ನಲ್ಲಿ ತೆರೆಗೆ ಬರುವುದು ಖಚಿತ.ಇದಾಗಲೇ ದಿನಾಂಕ ನಿಗದಿಗೊಳಿಸಿರುವ ಚಿತ್ರತಂಡ ವಿತರಕರ ಹಾಗೂ ಚಿತ್ರಮಂದಿರಗಳನ್ನು ಅಂತಿಮಗೊಳಿಸುವತ್ತ ಗಮನ ನೀಡಿದೆ.
ಇನ್ನು ಗಣೇಶ್-ಪ್ರಶಾಂತ್ ಜೋಡಿಯ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿದ್ದು ಇದಕ್ಕೆ ಮುನ್ನ "ಝೂಮ್" ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿತ್ತು. ಚಿತ್ರದಲ್ಲಿ ಬಿ ಟೌನ್ ಬೆಡಗಿ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು ನಿಮ್ಮ ಸಿನಿಮಾ ಬ್ಯಾನರ್ ಅಡಿಯಲ್ಲಿ ನವೀನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದಲ್ಲಿ ದೇವ್ ಗಿಲ್ ಅಭಿನಯವಿದ್ದು ಜತೆಗೆ ಸಾಧು ಕೋಕಿಲಾ, ರಂಗಾಯಣ ರಘು, ಅವಿನಾಶ್, ಹರೀಶ್ ರಾಜ್, ಪದ್ಮಜಾ ರಾವ್, ಸತ್ಯಭಾಮಾ ಸಹ ನಟಿಸಿದ್ದಾರೆ.
ಚಿತ್ರಕ್ಕೆ ಎಸ್. ತಮನ್ ಸಂಗೀತವಿದ್ದರೆ ಸಂತೋಷ್ ರಾಜ್ ಪತ್ತಾಜೆ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com