'ಮಂಡ್ಯದ ಗಂಡಿಗೆ ಮೈಸೂರು ಸದಾ ಅಚ್ಚು ಮೆಚ್ಚು'

ಅಂಬರೀಷ್ ಗೆ ಮಂಡ್ಯಗ ಗಂಡು ಎಂಬ ಬಿರುದು ಬಂದಿದ್ದರೂ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಜೊತೆ ವಿಶೇಷ ನಂಟಿತ್ತು. ಹೀಗಾಗಿ ಎಲ್ಲಾ ಸಮಯದಲ್ಲೂ ...
ನಟ ಅಂಬರೀಷ್
ನಟ ಅಂಬರೀಷ್
Updated on: 
ಮೈಸೂರು:  ಅಂಬರೀಷ್ ಗೆ ಮಂಡ್ಯಗ ಗಂಡು ಎಂಬ ಬಿರುದು ಬಂದಿದ್ದರೂ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಜೊತೆ ವಿಶೇಷ ನಂಟಿತ್ತು. ಹೀಗಾಗಿ ಎಲ್ಲಾ ಸಮಯದಲ್ಲೂ ಮೈಸೂರೆಂದರೇ ಅಂಬರೀಷ್ ಗೆ ಅಚ್ಚು ಮೆಚ್ಚಾಗಿತ್ತು.
ಅಂಬರೀಷ್‌ ಮೂಲತಃ ಮಂಡ್ಯದವರಾದರೂ ಅವರ ಬಾಲ್ಯದ ದಿನಗಳನ್ನು ಮೈಸೂರಿನಲ್ಲೇ ಕಳೆದಿದ್ದಾರೆ. ಹೀಗಾಗಿ ಮೈಸೂರಿಗೂ ಮಂಡ್ಯದ ಗಂಡು ಅಂಬರೀಷ್‌ಗೂ ಅವಿನಾಭಾವ ನಂಟು. 
ನಗರದ ಚಾಮರಾಜಪುರಂನಲ್ಲಿರುವ ಖ್ಯಾತ ಸಂಗೀತಗಾರ, ಅಜ್ಜರಾದ ಪಿಟೀಲು ಚೌಡಯ್ಯ ಅವರ ಮನೆಯಲ್ಲೇ ಅಂಬರೀಷ್‌ ತಮ್ಮ ಬಾಲ್ಯದ ಬಹುಪಾಲು ಸಮಯವನ್ನು ಕಳೆದಿದ್ದಾರೆ. 
ಅಂಬರೀಷ್ ತಂದೆ ಹುಚ್ಚೇಗೌಡ ಮಂಡ್ಯ ಜಿಲ್ಲೆಯಲ್ಲಿ ಸಬ್ ರಿಜಿಸ್ಟಾರ್ ಆಗಿದ್ದರು,
ಮೈಸೂರಿನ ಸರಸ್ವತಿಪುರಂನ ತೆಂಗಿನತೋಪು ಬಳಿ ಅಂಬರೀಷ್‌ ಅವರ ಮನೆ ಇತ್ತು. ಅಲ್ಲೂ ಒಂದಷ್ಟು ದಿನ ಕಳೆದಿದ್ದಾರೆ. ಪ್ರಾಥಮಿಕ, ಪ್ರೌಢ ಹಾಗೂ ಪಿಯು ಶಿಕ್ಷ ಣವನ್ನು ಶಾರದಾವಿಲಾಸ ಪಿಯು ಕಾಲೇಜಿನಲ್ಲಿ ಪೂರೈಸಿದ್ದರು, ಹೀಗಾಗಿ ಅಂಬರೀಷ್ ಗೆ ಮೈಸೂ ಸದಾ ಮೆಚ್ಚಿನ ತಾಣವಾಗಿತ್ತು ಎಂದು ಅಖಿಲ ಭಾರತ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬನ್ನೂರು ರಾಜು ತಿಳಿಸಿದ್ದಾರೆ.
ಬನ್ನೂರು ರಾಜು ಅಂಬರೀಷ್ ಅವರ ಜೀವನ ಚರಿತ್ರೆ ಗುಣವಂತ ಎಂಬ ಪುಸ್ತಕ ಬರೆದಿದ್ದಾರೆ. 1998 ರಲ್ಲಿ ಸ್ವತಃ ಅಂಬರೀಷ್ ರಿಲೀಸ್ ಮಾಡಿದ್ದರು,  ಅಂಬರೀಷ್ ತಂದೆ ಹುಚ್ಚೇಗೌಡ ತಮ್ಮ ಮಗ ಡಾಕ್ಟರ್ ಆಗಬೇಕೆಂದು ಬಯಸಿದ್ದರು. ಹೀಗಾಗಿ ಪಿಯುಸಿಯಲ್ಲಿ ಸೈನ್ಸ್ ಕೊಡಿಸಿದ್ದರು., ಆದರೆ ಅಂಬರೀಷ್ ಪರೀಕ್ಷೆ ಪಾಸ್ ಮಾಡದ ಕಾರಣ ಚಿಂತೆಗೊಂಡ ಅರ ತಂದೆ ಬೆಂಗಳೂರಿನ ನ್ಯಾಷನಲ್ ಕಾಲೇಜಿಗೆ ಶಿಫ್ಟ್ ಮಾಡಿದರು. 
ಮೈಸೂರಿನಂತೆ ಬೆಂಗಳೂರಿನಲ್ಲಿಯೂ ಅಂಬರೀಷ್ ಅಪಾರ ಪ್ರಮಾಣದ ಸ್ನೇಹಿತರನ್ನು ಹೊಂದಿದ್ದರು, ನಟರಾದ ಮೇಲೆ ಅಂಬರೀಷ್ ತಮ್ಮ ಚಿಕ್ಕಮ್ಮ ರತ್ನ  ಅವರ ಮನೆಯಲ್ಲಿ ಇರುತ್ತಿದ್ದರು,. ಬೆಂಗಳೂರಿನ ಜೆಪಿ ನಗರದಲ್ಲಿ ಮನೆ ನಿರ್ಮಿಸಿದರು, ಆದರೂ ಮೈಸೂರಿನ ಮೇಲೆ ಅವರಿಗೆ ಪ್ರೀತಿ ಕಡಿಮೆಯಾಗಿರಲಿಲ್ಲ,
ಆಂಬರೀಷ್ ಅವರಿಗೆ ಕುದುರೆ ರೇಸ್ ಬಗ್ಗೆ ವಿಶೇಷ ಪ್ರೀತಿಯಿತ್ತು, ಹೀಗಾಗಿ 8 ಕುದುರೆಗಳ ಮಾಲೀಕರಾಗಿದ್ದರು. 1980 ರಿಂದಲೂ ಮೈಸೂರು ರೇಸ್ ಕ್ಲಬ್ ನ ಸದಸ್ಯರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com