#MeToo: ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ!

ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ ನೀಡಿದ್ದಾರೆ.
ಸಜಿದ್ ಖಾನ್
ಸಜಿದ್ ಖಾನ್

ಮುಂಬೈ: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ ನೀಡಿದ್ದಾರೆ.

ಸಜಿದ್ ಖಾನ್ ಅವರಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ನಟಿ  ರಾಚೆಲ್ ವೈಟ್,  ಸಹಾಯಕ ನಿರ್ದೇಶಕಿ ಸಲೊನಿ ಚೊಪ್ರಾ ಹಾಗೂ ಪತ್ರಕರ್ತ ಮಹಿಳೆಯೊಬ್ಬರು ಮಿ ಟೂ ಅಭಿಯಾನದಲ್ಲಿ ಆರೋಪ ಮಾಡಿದ್ದರು.

ಈ ಆರೋಪದ ಹಿನ್ನೆಲೆಯಲ್ಲಿ  ಕುಟುಂಬ ಹಾಗೂ ಸಿನಿಮಾದ ನಿರ್ಮಾಪಕರು, ಕಲಾವಿದರ  ಒತ್ತಡದಿಂದಾಗಿ ನೈತಿಕ ಹೊಣೆ ಹೊತ್ತು, ಸತ್ಯಾಂಶ ಹೊರಬರುವವರೆಗೂ ನಿರ್ದೇಶಕ ಸ್ಥಾನದಿಂದ  ಹಿಂದೆ ಸರಿಯುತ್ತಿರುವುದಾಗಿ  ಅವರು ಟ್ವಿಟ್ ಮಾಡಿದ್ದಾರೆ.
ಸಾಜಿದ್ ನದಿದ್ವಾಲಾ ಹೌಸ್ ಪುಲ್ 4 ಚಿತ್ರವನ್ನು ನಿರ್ಮಿಸುತ್ತಿದ್ದು, ಲಂಡನ್ , ಜೈಸಲ್ಮಾರ್ ಮತ್ತಿತರ ಕಡೆಗಳಲ್ಲಿ   ಈಗಾಗಲೇ ಶೇ.70 ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com