ಮತ್ತೊಂದು #MeToo, ತಿಥಿ ಚಿತ್ರದ ಬರಹಗಾರ ಈರೇಗೌಡ ವಿರುದ್ಧ ಯುವತಿಯಿಂದ ಗಂಭೀರ ಆರೋಪ

ನಟ ಅರ್ಜುನ್ ಸರ್ಜಾ ವಿರುದ್ಧ ಕೇಳಿಬಂದಿರುವ ಮೀಟೂ ಆರೋಪ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವಂತೆಯೇ ಇದೀಗ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೀಟೂ ಆರೋಪ ಕೇಳಿಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ಕೇಳಿಬಂದಿರುವ ಮೀಟೂ ಆರೋಪ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವಂತೆಯೇ ಇದೀಗ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೀಟೂ ಆರೋಪ ಕೇಳಿಬಂದಿದೆ.
ಈ ಹಿಂದೆ ತಿಥಿ ಚಿತ್ರದ ಮೂಲಕ ಭಾರಿ ಪ್ರಶಂಸೆ ಗಿಟ್ಟಿಸಿದ್ದ ಬರಹಗಾರ ಈರೇಗೌಡ ವಿರುದ್ಧ ಇದೀಗ ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯದ ಆರೋಪ ಮಾಡುತ್ತಿದ್ದು, ಕೆಲಸ ಕೇಳಿ ಹೋಗಿದ್ದ ತನನ್ನು ಈರೇಗೌಡ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು ಎಂದು ಯುವತಿ ಆರೋಪಿಸಿದ್ದಾಳೆ.
ಈ ಬಗ್ಗೆ ಏಕ್ತಾ ಎಂಬ ಯುವತಿ ತನ್ನ ಪೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಸಂಭಾಷಣೆಕಾರಳಾಗಬೇಕು ಎಂಬ ಆಸೆಯೊಂದಿಗೆ ಈರೇಗೌಡರ ಬಳಿ ಸೇರಿಕೊಂಡಿದ್ದೆ. ಆದರೆ ಈರೇಗೌಡ ತನ್ನ ಗೆಳೆಯನ ಮನೆಗೆ ಕರೆಸಿಕೊಂಡು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದ ಎಂದು ಏಕ್ತಾ ತನ್ನ ಪೇಸ್ ಬುಕ್ ನಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದಾರೆ.
ಇನ್ನು 'ತಿಥಿ' ಚಿತ್ರದ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ಈರೇಗೌಡ ಬಳಿಕ ಬಳೆ ಮಾರುವವರ ಕಥೆ ಹೇಳುವ ‘ಬಳೆಕೆಂಪ’ ಚಿತ್ರದ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದರು. 'ಬಳೆಕೆಂಪ' ಧರ್ಮಶಾಲಾ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನದ ಗೌರವ ಪಡೆದುಕೊಂಡಿತ್ತು. 'ಜಿಯೋ ಮಾಮಿ ಮುಂಬೈ ಫಿಲಂ ಫೆಸ್ಟಿವಲ್‌'ನ ಇಂಡಿಯಾ ಗೋಲ್ಡ್‌ ವಿಭಾಗ ಮತ್ತು ಲಿಂಗ ಸಮಾನತೆಗೆ ಸಂಬಂಧಿಸಿದ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಈವರೆಗೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ 12 ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.
ಮೀಟೂ ಆರೋಪ ಕೇಳಿ ಬರುತ್ತಿದ್ದಂತೆಯೇ 'ಬಳೆಕೆಂಪ'ನಿಗೆ ಧರ್ಮಶಾಲಾದಿಂದ ಗೇಟ್‌ಪಾಸ್ ಸಿಕ್ಕಿದೆ. 'ಜಿಯೋ ಮಾಮಿ' ಚಿತ್ರೋತ್ಸವಕ್ಕೂ ದೂರು ಸಲ್ಲಿಸಲು ಮಹಿಳಾ ಪರ ಹೋರಾಟಗಾರರು ನಿರ್ಧರಿಸಿದ್ದಾರೆ. ಫೈರ್ (ಫಿಲ್ಮ್ ಇಂಡಸ್ಟ್ರಿ ಫಾರ್ ಈಕ್ವಾಲಿಟಿ ಅಂಡ್ ರೈಟ್ಸ್‌) ಸಂಸ್ಥೆಗೆ ಸಂತ್ರಸ್ಥೆಯ ಪರವಾಗಿ ದೂರು ನೀಡಲು ಕೆಲವರು ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com