ಅ.25ಕ್ಕೆ ತಾರಕಾಸುರ ಟ್ರೈಲರ್ ಬಿಡುಗಡೆ

ಪೋಸ್ಟರ್ ಹಾಗೂ ಟೀಸರ್ ಗಳಿಂದಲೇ ಸಿನಿ ಪ್ರೇಮಿಗಳನ್ನು ಆಕರ್ಷಿಸುತ್ತಿರುವ ತಾರಕಾಸುರ ಚಿತ್ರದ ಟ್ರೈಲರ್ ಅ.25 ರಂದು ಬಿಡುಗಡೆಯಾಗಲಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಪೋಸ್ಟರ್ ಹಾಗೂ ಟೀಸರ್ ಗಳಿಂದಲೇ ಸಿನಿ ಪ್ರೇಮಿಗಳನ್ನು ಆಕರ್ಷಿಸುತ್ತಿರುವ ತಾರಕಾಸುರ ಚಿತ್ರದ ಟ್ರೈಲರ್ ಅ.25 ರಂದು ಬಿಡುಗಡೆಯಾಗಲಿದೆ. 
ಈಗಾಗಲೇ ಚಿತ್ರದ ಹಾಡುಗಳನ್ನು ಪೂರ್ಣಗೊಳಿಸಿರುವ ಚಿತ್ರ ತಂಡ ಟ್ರೈಲರ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. 
ಚಿತ್ರದಲ್ಲಿ ಕನ್ನಡ ಕಲಿಯೋ ಮುಂಡೆದೆ ಹಾಡಲನ್ನು ನಟ ಶಿವರಾಜ್ ಕುಮಾರ್ ಅವರು ಹಾಡಿದ್ದು, ಈಗಾಗಲೇ ಸಿನಿಪ್ರೇಮಿಗಳ ಮನವನ್ನು ಚಿತ್ರ ಸೆಳೆದಿದೆ. ನಟ ಶ್ರೀಮುರಳಿ ಅಭಿನಯಿರುವ ಸೂಪರ್ ಹಿಟ್ ರಥಾವರ ಚಿತ್ರವನ್ನು ನಿರ್ದೇಶನ ಮಾಡಿದ್ದ ಚಂದ್ರಶೇಖರ ಬಂಡಿಯಪ್ಪ ಅವರು ತಾರಕಾಸುರ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 
ಚಿತ್ರದಲ್ಲಿ ಕೆಂಡಸಂಪಿಗೆ ಚಿತ್ರದ ನಟಿ ಮಾನ್ವಿತಾ ಅವರು ಅಭಿನಯಿಸುತ್ತಿದ್ದು, ವಿಶೇಷ ಪಾತ್ರದಲ್ಲಿ ಹಾಲಿವುಡ್ ನಟ ಡ್ಯಾನಿ ಸಫಾನಿ ಕಾಣಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com