ಸಂಧಾನ ಎಂಬ ಪದಕ್ಕೆ ಇಲ್ಲಿ ಆಸ್ಪದವಿಲ್ಲ, ನನ್ನಿಂದ ತಪ್ಪಾಗಿದ್ದರೆ ಕೋರ್ಟ್ ನಲ್ಲಿ ನನಗೇ ಶಿಕ್ಷೆಯಾಗಲಿ: ಅರ್ಜುನ್ ಸರ್ಜಾ

ಸ್ಯಾಂಡಲ್ ವುಡ್ ಮೀಟೂ ಪ್ರಕರಣ ತಾರಕಕ್ಕೇರಿದ್ದು, ನಟಿ ಶ್ರುತಿ ಹರಿಹರನ್ ವಿರುದ್ಧ ಕಿಡಿಕಾರಿರುವ ನಟ ಅರ್ಜುನ್ ಸರ್ಜಾ ಪ್ರಸ್ತುತ ಸಂಧಾನದ ಮಾತೇ ಇಲ್ಲ. ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ನಟ ಅರ್ಜುನ್ ಸರ್ಜಾ
ಸುದ್ದಿಗೋಷ್ಟಿಯಲ್ಲಿ ನಟ ಅರ್ಜುನ್ ಸರ್ಜಾ
Updated on: 
ಬೆಂಗಳೂರು: ಸ್ಯಾಂಡಲ್ ವುಡ್ ಮೀಟೂ ಪ್ರಕರಣ ತಾರಕಕ್ಕೇರಿದ್ದು, ನಟಿ ಶ್ರುತಿ ಹರಿಹರನ್ ವಿರುದ್ಧ ಕಿಡಿಕಾರಿರುವ ನಟ ಅರ್ಜುನ್ ಸರ್ಜಾ ಪ್ರಸ್ತುತ ಸಂಧಾನದ ಮಾತೇ ಇಲ್ಲ. ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಚಲನಚಿತ್ರ  ವಾಣಿಜ್ಯ ಮಂಡಳಿಯಲ್ಲಿ ಇಂದು ನಡೆದ ಸಂಧಾನ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಅರ್ಜುನ್ ಸರ್ಜಾ, ಪ್ರಸ್ತುತ ತಾವು ಪ್ರಕರಣದ ಸಂಬಂಧ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇಲ್ಲಿ ಸಂಧಾನದ ಮಾತೇ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ತಾವು ಕೋರ್ಟ್ ನಲ್ಲೇ ನ್ಯಾಯಕ್ಕಾಗಿ ಹೋರಾಡಲಿದ್ದು, ಕೋರ್ಟ್ ತಪ್ಪು ನನ್ನದೇ ಎಂದು ತೀರ್ಪು ನೀಡಿದರೆ ಖಂಡಿತಾ ನಾನು ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
'ಫಿಲ್ಮ್ ಚೇಂಬರ್ ಸದಸ್ಯರ ಮೇಲೆ ನಾನು ಕಳೆದ 35 ರಿಂದ 38 ವರ್ಷಗಳಿಂದ ಅಪಾರ ಗೌರವವನ್ನು ಹೊಂದಿದ್ದೇನೆ. ಇಂದು ನನಗೆ ಕರೆದರು ಹಾಗಾಗಿ ಬಂದಿದ್ದೇನೆ. ನನಗೆ ನೋವು ಆಗಿದ್ದರೆ, ಸುಮ್ಮನಿರುತ್ತಿದ್ದೆ. ನನ್ನ ಮೇಲಿನ ಆರೋಪದ ಮೂಲಕ ನನ್ನನ್ನು ನಂಬಿದವರು, ಕುಟುಂಬ ಸದಸ್ಯರು ಕೇರಳ, ತಮಿಳುನಾಡು, ಆಂಧ್ರ ಕರ್ನಾಟಕದ ಅಭಿಮಾನಿಗಳು ನೊಂದಿದ್ದಾರೆ. ಹಾಗಾಗಿ ನಾನು ನ್ಯಾಯಾಲಯದ ಮೊರೆ ಹೋಗುತ್ತಿದ್ದೇನೆ. ಒಂದು ವೇಳೆ ಕೋರ್ಟ್ ನನ್ನದೇ ತಪ್ಪು ಎಂದು ತೀರ್ಮಾನಿಸಿದರೆ ಖಂಡಿತಾ ಶಿಕ್ಷೆ ಅನುಭಸಲು ಸಿದ್ಧನಿದ್ದೇನೆ.
ನನ್ನ ತೇಜ್ಯೋವಧೆಗೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಅದು ಯಾರೆಂಬುದು ನಿಮಗೆಲ್ಲರಿಗೂ ಶೀಘ್ರ ತಿಳಿಯಲಿದೆ. ಪ್ರಕರಣ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಹೆಚ್ಚಾಗಿ ಮಾತನಾಡೋದಿಲ್ಲ. ಮಾಧ್ಯಮಗಳ ಮುಂದೆ ಪ್ರಕರಣದ ಕುರಿತು ಹೆಚ್ಚು ಮಾತನಾಡಬಾರದು ಎಂದು ಹಿರಿಯರು ಹೇಳಿದ್ದಾರೆ. ಹಾಗಾಗಿ ನಾನು ಏನನ್ನೂ ಹೇಳಲ್ಲ. ಸಂಧಾನ ಎಂಬುವುದೇ ಇಲ್ಲ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com