ಊಟಕ್ಕೆ ಕರೆದಿದ್ದೇ ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ನನ್ನನ್ನೂ ಕೂಡ ಊಟಕ್ಕೆ ಕರೆದಿದ್ದಾರೆ: ಐಶ್ವರ್ಯ ಸರ್ಜಾ

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಹಾಗೂ ಅವರ ಆರೋಪಕ್ಕೆ ಬೆಂಬಲ ನೀಡಿರುವ ನಟ ಚೇತನ್ ಬಗ್ಗೆ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.
ಊಟಕ್ಕೆ ಕರೆದಿದ್ದೇ ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ನನ್ನನ್ನೂ ಕೂಡ ಊಟಕ್ಕೆ ಕರೆದಿದ್ದಾರೆ: ಐಶ್ವರ್ಯ ಸರ್ಜಾ
ಊಟಕ್ಕೆ ಕರೆದಿದ್ದೇ ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ನನ್ನನ್ನೂ ಕೂಡ ಊಟಕ್ಕೆ ಕರೆದಿದ್ದಾರೆ: ಐಶ್ವರ್ಯ ಸರ್ಜಾ
Updated on
ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಹಾಗೂ ಅವರ ಆರೋಪಕ್ಕೆ ಬೆಂಬಲ ನೀಡಿರುವ ನಟ ಚೇತನ್ ಬಗ್ಗೆ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. 
ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಐಶ್ವರ್ಯ ಸರ್ಜಾ,  ಶ್ರುತಿ ಹರಿಹರನ್ ತಮ್ಮ ಆರೋಪದ್ಲಲಿ ಅರ್ಜುನ್ ಸರ್ಜಾ ಡಿನ್ನರ್ ಗೆ ಕರೆದಿದ್ದರು ಎಂದು ಉಲ್ಲೇಖಿಸಿದ್ದಾರೆ. ಊಟಕ್ಕೆ ಕರೆದಿದ್ದೇ ಲೈಂಗಿಕ ಕಿರುಕುಳ ಆಗುವುದಾದರೆ  ನಟ ಚೇತನ್ ಸಹ ನನ್ನನ್ನು ಊಟಕ್ಕೆ ಕರೆದಿದ್ದರು, ಅದೂ ಕೂಡ ಲೈಂಗಿಕ ಕಿರುಕುಳವಾಗಬಹುದು ಎಂದು ಐಶ್ವರ್ಯ ಸರ್ಜಾ ಹೇಳಿದ್ದಾರೆ. 
#MeToo ಆರೋಪ ಮಾಡುವುದಕ್ಕೂ ಒಂದು ತಿಂಗಳ ಹಿಂದೆಯಷ್ಟೇ ಶ್ರುತಿ ಹರಿಹರನ್ ನನ್ನ ತಂದೆ ಟ್ವಿಟರ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ. ಘಟನೆ ನಡೆದು ಅಷ್ಟು ದಿನವಾಗಿದ್ದರೂ  ಶ್ರುತಿ ಹರಿಹರನ್ ಟ್ವಿಟರ್ ನಲ್ಲಿ ಏಕೆ ನನ್ನ ತಂದೆಯವರನ್ನು ಏಕೆ ಅನ್ ಫಾಲೋ ಮಾಡಲಿಲ್ಲ, ಶ್ರುತಿ ಹರಿಹರನ್ ಗೆ ಸ್ವಾಭಿಮಾನ ಇರಲಿಲ್ಲವೇ? ಇಷ್ಟು ದಿನ ಸುಮ್ಮನಿದ್ದಿದ್ದರ ಬಗ್ಗೆ ಉತ್ತರಿಸಬೇಕಿದೆ ಐಶ್ವರ್ಯ ಸರ್ಜಾ ಹೇಳಿದ್ದಾರೆ. 
ನಟ ಚೇತನ್ ಪ್ರೇಮ ಬರಹ ಸಿನಿಮಾ ವರ್ಕ್ ಶಾಪ್ ವೇಳೆ ನಟ ಚೇತನ್ ನನ್ನ ಬೆನ್ನು ಮುಟ್ಟಿದ್ದರು, ಅಲ್ಲದೇ ಊಟಕ್ಕೂ ಕರೆದಿದ್ದರು. ಇದನ್ನೂ ಲೈಂಗಿಕ ಕಿರುಕುಳ ಎಂದು ಕರೆಯಬಹುದುಲ್ಲವೇ ಎಂದು ಐಶ್ವರ್ಯ ಪ್ರಶ್ನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com