ರಂಭಾ ತಾವು ತಾಯಿಯಾಗಿರುವ ಸಂತಸವನ್ನು ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ."ಬೇಬಿ ಬಾಯ್" ಎಂದು ಚಿತ್ರ ಹಾಕಿರುವ ಈ ಪೋಸ್ಟ್ ನಲ್ಲಿ ಸೆಪ್ಟೆಂಬರ್ 23ರಂದು ನಾನು ಟೊರೆಂಟೋನ ಮೌಂಟ್ ಸಿನೈ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದೆ. ಇದೀಗ ನಾನು ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದೇವೆ ಎಂದು ರಭಾ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.