ಶುರುವಾಯ್ತು 'ತಲೈವಾ' ದರ್ಬಾರ್: ಫರ್ಸ್ಟ್ ಲುಕ್ ರಿಲೀಸ್

ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ 167 ನೇ ತಮಿಳು ಸಿನಿಮಾಗೆ ’ದರ್ಬಾರ್’ ಎಂದು ಹೆಸರಿಡಲಾಗಿದೆ....
ದರ್ಬಾರ್ ಪೋಸ್ಟರ್
ದರ್ಬಾರ್ ಪೋಸ್ಟರ್
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ 167 ನೇ ತಮಿಳು ಸಿನಿಮಾಗೆ ’ದರ್ಬಾರ್’ ಎಂದು ಹೆಸರಿಡಲಾಗಿದೆ. ದರ್ಬಾರ್ ಸಿನಿಮಾದ ಫರ್ಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ,
ದರ್ಬಾರ್ ಸಿನಿಮಾದಲ್ಲಿ ರಜನಿಕಾಂತ್  ಖಡಕ್ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಿರ್ದೇಶಕ ಮುರುಗದಾಸ್ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. 
ವಿಶೇಷವೇನೆಂದರೆ ಮುರುಗದಾಸ್ ರಜನಿಗೆ ಅ್ಯಕ್ಷನ್ ಕಟ್ ಹೇಳುತ್ತಿದ್ದು ಇದೇ ಮೊದಲು. ರಜಿನಿಯನ್ನು ಐಪಿಎಸ್ ಅಧಿಕಾರಿ ಹಾಗೂ ಸಮಾಜ ಸೇವಕನಾಗಿ ದ್ವಿಪಾತ್ರದಲ್ಲಿ ತೋರಿಸುತ್ತಿದ್ದಾರೆ.
ಇನ್ನು ಲೈಕಾ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ನಯನತಾರ ನಾಯಕಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಏಪ್ರಿಲ್ 10 ರಿಂದ ಶುರುವಾಗಲಿದ್ದು ಮುಂದಿನ ವರ್ಷ ಸಂಕ್ರಾಂತಿಗೆ ತೆರೆ ಕಾಣಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com