ಲಕ್ಷ್ಮಿ ರೈ ನಟನೆಯ 'ಝಾನ್ಸಿ' ಚಿತ್ರಕ್ಕೆ ಡಿಮ್ಯಾಂಡ್: ಬೇರೆ ಭಾಷೆಗಳಿಗೂ ಡಬ್ಬಿಂಗ್ ಮಾಡಲು ಬೇಡಿಕೆ

ಪಿವಿಆರ್ ಗುರುಪ್ರಸಾದ್ ನಿರ್ದೇಶನದ ಝಾನ್ಸಿ ಸಿ ಸಿನಿಮಾದಲ್ಲಿ ನಟಿ ಲಕ್ಷ್ಮಿ ರೈ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಲಕ್ಷ್ಮಿ ರೈ
ಲಕ್ಷ್ಮಿ ರೈ
Updated on
ಪಿವಿಆರ್ ಗುರುಪ್ರಸಾದ್ ನಿರ್ದೇಶನದ ಝಾನ್ಸಿ ಸಿ ಸಿನಿಮಾದಲ್ಲಿ ನಟಿ ಲಕ್ಷ್ಮಿ ರೈ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಮಹಿಳಾ ಕೇಂದ್ರೀಕೃತ ಕಥೆ ಆಧಾರಿತ ಸಿನಿಮಾ ಡಬ್ಬಿಂಗ್ ಸ್ಟುಡಿಯೋ ಪ್ರವೇಶಿಸಿದೆ, 2012 ರಲ್ಲಿ ತೆರೆಕಂಡ ಕಲ್ಪನಾ ಚಿತ್ರದಲ್ಲಿ ಲಕ್ಷ್ಮಿ ರೈ ಉಪೇಂದ್ರ ಜೊತೆ ನಟಿಸಿದ್ದರು.
ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ 500ನೇ ಸಿನಿಮಾ ಕೂಡ ಇದಾಗಿದೆ, ಸಿನಿಮಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫೈಟಿಂಗ್ ಇದ್ದು ಲಕ್ಷ್ನಿ ರೈ ಕೂಡ ಹಲವು ಫೈಟಿಂಗ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಲಕ್ಷ್ಮಿ ಎರಡು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಒಂದು ಪೊಲೀಸ್ ಅಧಿಕಾರಿ ಮತ್ತೊಂದು ಗ್ಲಾಮರ್ ಬೊಂಬೆಯಾಗಿ ಕಾಣಿಸಿಕೊಂಡಿದ್ದಾರೆ.
ಹೀಗಾಗಲೇ ಹಿಂದಿ ಡಬ್ಬಿಂಗ್ ಹಕ್ಕು ಮಾರಾಟವಾಗಿದ್ದು ದಕ್ಷಿಣ ಭಾರತದ ಬೇರೆ ಭಾಷೆಗಳಲ್ಲಿ ಟಬ್ಬಿಂಗ್ ಗಾಗಿ ಒತ್ತಡ ಹೆಚ್ಚಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಹಲವರ ಡಿಮ್ಯಾಂಡ್ ನಿಂದಾಗಿ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಡಬ್ಬಿಂಗ್ ಮಾಡಿ ರಿಲೀಸ್ ಮಾಡಲು ತೀರ್ಮಾನಿಸಲಾಗಿದೆ, ಶ್ರೀಜಿತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com