ನನ್ನ ಹೆಂಡತಿ ಪಕ್ಕಾ ಮಲಗಬೇಕಂದ್ರೆ ನಿಮ್ಮನ್ನ ಕೇಳಬೇಕಾ: ಸುದೀಪ್ ಕುರಿತು ಕೇಳಿದ್ದಕ್ಕೆ ದರ್ಶನ್ ಗರಂ!

ನನ್ನ ಹೆಂಡತಿ ಪಕ್ಕಾ ಮಲಗಬೇಕಂದ್ರೂ ನಿಮ್ಮನ್ನ ಕೇಳಬೇಕಾ. ನನ್ನ ವೈಯಕ್ತಿಕ ವಿಚಾರಗಳನ್ನು ನಿರ್ಧಾರ ಮಾಡುವುದು ನಾನೇ ಎಂದು ಮಾಧ್ಯಮದವರ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ ಆಗಿದ್ದಾರೆ.
ಸುದೀಪ್-ದರ್ಶನ್
ಸುದೀಪ್-ದರ್ಶನ್
Updated on: 
ಬೆಂಗಳೂರು: ನನ್ನ ಹೆಂಡತಿ ಪಕ್ಕಾ ಮಲಗಬೇಕಂದ್ರೂ ನಿಮ್ಮನ್ನ ಕೇಳಬೇಕಾ. ನನ್ನ ವೈಯಕ್ತಿಕ ವಿಚಾರಗಳನ್ನು ನಿರ್ಧಾರ ಮಾಡುವುದು ನಾನೇ ಎಂದು ಮಾಧ್ಯಮದವರ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ ಆಗಿದ್ದಾರೆ.
ಆಗಸ್ಟ್ 9ರಂದು ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಬಿಡುಗಡೆಯಾಗುತ್ತಿದ್ದು ಈ ಹಿನ್ನಲೆಯಲ್ಲಿ ಚಿತ್ರತಂಡ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದರ್ಶನ್ ಮಾಧ್ಯಮಗಳ ವಿರುದ್ಧ ಗರಂ ಆದರು. 
ಅಭಿಮಾನಿಗಳ ಮನಸ್ಸಿನಲ್ಲಿ ದರ್ಶನ್ ಮತ್ತು ಸುದೀಪ್ ಅವರು ಅಂಬರೀಶ್ ಮತ್ತು ವಿಷ್ಣುವರ್ಧನ್ ರಂತೆ. ಈ ಬಗ್ಗೆ ಸುದೀಪ್ ಅವರನ್ನು ಕೇಳಿದಾಗ ದರ್ಶನ್ ನನ್ನ ಗೆಳೆಯ. ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತಾನೆ ಎಂದು ಹೇಳುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದಾಗ ನೆಟಿಗರು ಈ ಬಗ್ಗೆ ಸುದೀಪ್ ರನ್ನೇ ಕೇಳುತ್ತೀರಿ ದರ್ಶನ್ ರ ಬಳಿಯೂ ಕೇಳಿ ಎಂದು ಹೇಳುತ್ತಾರೆ. 
ಇದಕ್ಕೆ ನೀವು ಏನನ್ನುತ್ತೀರಾ ಎಂದು ಕೇಳಿದಾಗ ದರ್ಶನ್ ಕೋಪಗೊಂಡು ನಾನು ಏನು ಮಾಡಬೇಕು? ಯಾವಾಗ ಓಳಬೇಕು? ಯಾವಾಗ ಊಟ ಮಾಡಬೇಕು? ಯಾರ ಸ್ನೇಹ ಮಾಡಬೇಕು? ರಾತ್ರಿ ನನ್ನ ಹೆಂಡತಿ ಪಕ್ಕಾ ಮಲಗಬೇಕಾ ಅಥವಾ ಬೇಡವಾ ಎಂಬುದನ್ನು ಮಾಧ್ಯಮದವರು ನೀವು ನಿರ್ಧಾರ ಮಾಡುತ್ತೀರಾ? ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com