ಪುನೀತ್ ಅಭಿನಯದ 'ಜೇಮ್ಸ್ 'ಚಿತ್ರಕ್ಕೆ ಟಗರು ಖ್ಯಾತಿಯ ಚರಣ್ ರಾಜ್ ಸಂಗೀತ ಸಂಯೋಜನೆ

ಚೇತನ್ ಕುಮಾರ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಲಿದ್ದಾರೆ
ಪುನೀತ್ ರಾಜ್ ಕುಮಾರ್, ಚರಣ್ ರಾಜ್ ಮತ್ತಿತರರು
ಪುನೀತ್ ರಾಜ್ ಕುಮಾರ್, ಚರಣ್ ರಾಜ್ ಮತ್ತಿತರರು
Updated on: 

ಬೆಂಗಳೂರು: ಚೇತನ್ ಕುಮಾರ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ಈ ಮೂವರು ಒಟ್ಟಿಗೆ ಚಿತ್ರ ಮಾಡುತ್ತಿದ್ದಾರೆ.  ಹೇಮಂತ್ ಎಂ ರಾವ್ ಅವರ ಗೋಧಿ ಬಣ್ಣ ಸಾಧಾರಾಣ ಮೈಕಟ್ಟು ಸಿನಿಮಾ ಮೂಲಕ  ಚರಣ್ ರಾಜ್ ಮೊದಲ ಬಾರಿಗೆ ಬೆಳಕಿಗೆ ಬಂದಿದ್ದರು. 

ಸೂರಿ ನಿರ್ದೇಶನದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾದಲ್ಲಿನ ವಿಶಿಷ್ಠ ಸಂಗೀತ ಸಂಯೋಜನೆಯಿಂದ ಖ್ಯಾತಿ ಪಡೆದಿರುವ ಚರಣ್ ರಾಜ್, ಇದೀಗ ಜೇಮ್ಸ್ ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಜೊತೆಗೆ ಕೆಲಸ ಮಾಡುತ್ತಿದ್ದಾರೆ. 

ಸಾಹಿತ್ಯದಿಂದಲೂ ಗುರುತಿಸಿಕೊಂಡಿರುವ ಚೇತನ್, ಆಕ್ಷನ್ ಮಿಶ್ರಿತ ಕಮರ್ಷಿಯಲ್ ಸಿನಿಮಾ ಮಾಡುತ್ತದ್ದು, ಮೂವರ ಸಂಗಮದ ಬಗ್ಗೆ ಪುನೀತ್ ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ. 

ಕಿಶೋರ್ ಪತಿಕೊಂಡಾ ನಿರ್ಮಿಸುತ್ತಿರುವ ಈ ಚಿತ್ರ ಇದೀಗ ಪ್ರಿ- ಪ್ರೊಢಕ್ಷನ್ ಹಂತದಲ್ಲಿದೆ. 2020ರಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಸದ್ಯ ಆನಂದ್ ರಾಮ್ ಅವರ ಯುವರತ್ನ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪುನೀತ್, ಜನವರಿ ಮೊದಲ ಹಂತದಿಂದ ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com