ವಿಜಯ್ ರಾಘವೇಂದ್ರ ಮುಂದಿನ ಸಿನಿಮಾ 'ಮಾಲ್ಗುಡಿ ಡೇಸ್'

ನಟ ವಿಜಯ್ ರಾಘವೇಂದ್ರ ಅವರ ಮುಂದಿನ ಚಿತ್ರ ಮಾಲ್ಗುಡಿ ಡೇಸ್. ಹಿರಿಯ ನಟ ದಿವಂಗತ ಶಂಕರ್ ನಾಗ್...
ವಿಜಯ್ ರಾಘವೇಂದ್ರ
ವಿಜಯ್ ರಾಘವೇಂದ್ರ
Updated on

ನಟ ವಿಜಯ್ ರಾಘವೇಂದ್ರ ಅವರ ಮುಂದಿನ ಚಿತ್ರ ಮಾಲ್ಗುಡಿ ಡೇಸ್. ಹಿರಿಯ ನಟ ದಿವಂಗತ ಶಂಕರ್ ನಾಗ್ ಇದೇ ಹೆಸರಿನಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಟಿ ವಿ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದರು, ಅದು ದೇಶಾದ್ಯಂತ ಜನಪ್ರಿಯವಾಗಿತ್ತು ಕೂಡ.

ವಿಜಯ್ ರಾಘವೇಂದ್ರ ಅಭಿನಯದ ಈ ಸಿನಿಮಾಕ್ಕೂ, ಶಂಕರ್ ನಾಗ್ ಅವರು ಮಾಡುತ್ತಿದ್ದ ಮಾಲ್ಗುಡಿ ಡೇಸ್ ಟಿ ವಿ ಶೋಗೂ ಯಾವುದೇ ಸಾಮ್ಯತೆಯಿಲ್ಲ. ಕಿಶೋರ್ ಮೂಡಬಿದ್ರಿ ನಿರ್ದೇಶನದ ಮಾಲ್ಗುಡಿ ಡೇಸ್ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

ಕೆ ರತ್ನಾಕರ್ ಕಾಮತ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರದ ಮೊದಲ ಪೋಸ್ಟರ್ ನ್ನು ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com