'ಚಂಬಲ್' ಡಿಕೆ ರವಿ ಜೀವನಗಾಥೆಯಲ್ಲ: ನಿರ್ದೇಶಕ ಜಾಕೋಬ್ ವರ್ಗೀಸ್

"ಚಂಬಲ್" ಚುಇತ್ರದ ಮೂಲಕ ಹೊಸದೊಂದು ಕ್ರೇಜ್ ಸೃಷ್ಟಿಸುವ ನಿಟ್ಟಿನಲ್ಲಿ ಚಿತ್ರ ನಿರ್ದೇಶಕ ಜಾಕೋಬ್ ವರ್ಗೀಸ್ ತಯಾರಿ ನಡೆಸಿದ್ದಾರೆ. ಅವರು ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ.....
ಚಂಬಲ್
ಚಂಬಲ್
ಬೆಂಗಳೂರು: "ಚಂಬಲ್" ಚುಇತ್ರದ ಮೂಲಕ ಹೊಸದೊಂದು ಕ್ರೇಜ್ ಸೃಷ್ಟಿಸುವ ನಿಟ್ಟಿನಲ್ಲಿ ಚಿತ್ರ ನಿರ್ದೇಶಕ ಜಾಕೋಬ್ ವರ್ಗೀಸ್ ತಯಾರಿ ನಡೆಸಿದ್ದಾರೆ. ಅವರು ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪುನರಾಗಮನವಾಗುತ್ತಿದ್ದಾರೆ.ಚಿತ್ರದಲ್ಲಿ ನೀನಾಸಂ ಸತೀಶ್ ಮುಖ್ಯ ಪಾತ್ರದಲಿದ್ದು ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರದ ಟ್ರೈಲರ್ ಮತ್ತು ಟೀಸರ್ ಇದಾಗಲೇ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದೆ.ಇನ್ನು ಈ ಚಿತ್ರ ಕರ್ತವ್ಯ ನಿಷ್ಠ ಅಧಿಕಾರಿಯಾಗಿದ್ದ ಡಿಕೆ ರವಿ ಅವರ ಜೀವನ ಆಧರಿಸಿದೆ ಎಂದು ಹೇಳಲಾಗಿದ್ದರೂ ನಿರ್ದೇಶಕರು ಹಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ನಿರ್ದೇಶಕರು ಈ ಚಿತ್ರಕಥೆ ಹಲವು ಐಎಎಸ್  ಅಧಿಕಾರಿಗಳ ಜೀವನದಿಂದ ಸ್ಪೂರ್ತಿ ಪಡೆದಿದೆ ಎಂದು ಹೇಳಿದ್ದಾರೆ."ಇದು ಒಂದು ಥ್ರಿಲ್ಲರ್ ಚಿತ್ರ. ಚಿತ್ರದಲ್ಲಿದ್ದದ್ದು ಒಂದು ಕಾಲ್ಪನಿಕ ಕಥೆಯಷ್ಟೆ.. ವಾಸ್ತವವಾಗಿ, ಈ ಕಥೆಗಳು ತಮ್ಮ ಜೀವನಕ್ಕೆ ಸಮೀಪವಾಗಿದೆ.ಹೇಗಾದರೂ, ಯಾರೊಬ್ಬರನ್ನೂ ನೋಯಿಸುವ ಅಥವಾ ಅವಮಾನಿಸುವ ತಪ್ಪು ಉದ್ದೇಶವನ್ನು ನಾವೇನೂ ಹೊಂದಿಲ್ಲ.. ನಮ್ಮ ಸುತ್ತ ನಡೆಯುವ ಘಟನೆಗಳ ಮೂಲಕ ನಾವು ಸ್ಪೂರ್ತಿ ಪಡೆದುಕೊಂಡಿದ್ದೇವೆ" ಅವರು ಹೇಳುತ್ತಾರೆ.
ಈ ಮುನ್ನ ಚಿತ್ರಕ್ಕೆ "ಸುಭಾಷ್" ಎಂದು ಹೆಸರಿಡಲು ಉದ್ದೇಶಿಸಿದ್ದ ನಿರ್ದೇಶಕರಿಗೆ ಆ ಟೈಟಲ್ ಸಿಕ್ಕದೆ ಹೋದದ್ದರಿಂದ "ಚಂಬಲ್" ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರು. ಚಿತ್ರದ ಮುಖ್ಯ ಪಾತ್ರದ ಹೆಸರು ಸುಭಾಷ್ ಎಂದೇ ಉಳಿಸಿಕೊಳ್ಳಲಾಗಿದೆ."ಚಂಬಲ್ ಒಂದು ರೂಪಕ, ಇದು ಕಾಂಕ್ರೀಟ್ ಕಾಡಿನಲ್ಲಿ ನಮ್ಮ ಸುತ್ತ ನಡೆಯುತ್ತಿರುವ ಹಿಂಸೆಯನ್ನು ಪ್ರತಿಬಿಂಬಿಸಲಿದೆ" ಎಂದು ನಿರ್ದೇಶಕರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com